ಮುಂಬೈ: ಭಾರತೀಯ ಆಟಗಾರರು ಆಸ್ಟ್ರೇಲಿಯಾ ಪ್ರೇಕ್ಷಕರಿಂದ ಜನಾಂಗೀಯ ನಿಂದನೆಗೊಳಗಾಗಿರುವುದನ್ನು ಕಟುವಾಗಿ ಟೀಕಿಸಿರುವ ಭಾರತ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್, ನೀವು ಆಟಗಾರರಿಗೆ ಗೌರವ ಕೊಡದಿದ್ದರೆ ಸ್ಟೇಡಿಯಂಗೆ ಬರಬೇಡಿ ಎಂದು ಹೇಳಿದ್ದಾರೆ.
ಸಿಡ್ನಿ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ರನ್ನು ಪ್ರೇಕ್ಷಕರ ಗುಂಪೊಂದು ಅವಾಚ್ಯವಾಗಿ ನಿಂದಿಸಿದ್ದರಿಂದ ಭದ್ರತಾ ಸಿಬ್ಬಂದಿ ಅವರನ್ನು ಸ್ಟೇಡಿಯಂನಿಂದ ಹೊರ ಕಳುಹಿಸಿದ್ದರು.
"ಮೈದಾನದಲ್ಲಿ ನೀವು ಆಟಗಾರರನ್ನು ಗೌರವಿಸುವುದಿಲ್ಲ ಎಂದರೆ ಸ್ಟೇಡಿಯಂಗೆ ಬರಬೇಡಿ" ಎಂದು ಟ್ವಿಟರ್ ಮೂಲಕ ಪಠಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ಈ ರೀತಿಯ ತಾರತಮ್ಯದ ನಡವಳಿಕೆಯನ್ನು ಅತ್ಯಂತ ಪ್ರಬಲವಾಗಿ ಖಂಡಿಸುತ್ತದೆ. ನೀವು ವರ್ಣಭೇದ ನೀತಿಯಲ್ಲಿ ತೊಡಗಿದರೆ, ಆಸ್ಟ್ರೇಲಿಯಾದ ಕ್ರಿಕೆಟ್‌ನಲ್ಲಿ ನಿಮಗೆ ಸ್ವಾಗತವಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಸಮಗ್ರತೆ ಮತ್ತು ಭದ್ರತೆಯ ಮುಖ್ಯಸ್ಥ ಸೀನ್ ಕ್ಯಾರೊಲ್ ಭಾನುವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ಇದು ನಾಚಿಕೆಗೇಡು, ನನ್ನ ಜೀವನದಲ್ಲಿ ಕಾಡುವ ಘಟನೆ.. ಜನಾಂಗೀಯ ನಿಂದನೆ ಬಗ್ಗೆ ಲ್ಯಾಂಗರ್ ಕಿಡಿ