ಮುಂಬೈ:ಕೊರೊನಾ ವೈರಸ್ ಭೀತಿಯಿಂದ ಐಸಿಸಿ ಚೆಂಡು ಹೊಳೆಯಲು ಎಂಜಲು ಬಳಕೆ ಮಾಡುವುದನ್ನು ಕ್ರಿಕೆಟ್ ಸಲಹಾ ಸಮಿತಿಯ ಶಿಫಾರಸಿನ ಮೇಲೆ ನಿಷೇಧ ಹೇರಲಾಗಿದೆ. ಆದರೆ, ಅದಕ್ಕೆ ಪರ ವಿರೋದ ಚರ್ಚೆ ನಡೆಯುತ್ತಿರುವಾಗ ಭಾರತದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಅಮೂಲ್ಯ ಸಲಹೆ ನೀಡಿದ್ದಾರೆ.
ಲಾಲಾರಸ ಬಳಕೆ ನಿಷೇಧ ಮಾಡಿದರೆ ಬೌಲರ್ಗಳಿಗೆ ಕಷ್ಟವಾಗಲಿದೆ ಎಂದು ಕೆಲವು ಮಾಜಿ ಬೌಲರ್ಗಳು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಚೆಂಡು ಹೊಳೆಯುವಂತೆ ಮಾಡಲು ಎಂಜಲು ಬಳಸಬೇಕೆಂದೇನೂ ಇಲ್ಲ, ಬದಲಾಗಿ ಬೆವರನ್ನೂ ಸಹ ಬಳಸಬಹುದು ಎಂದಿದ್ದರು. ಆದರೆ, ಅಗರ್ಕರ್ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದು, ಕೊರೊನಾ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಎಂದು ಬಂದರೆ ಅಂತಹ ಬೌಲರ್ಗಳು ಎಂಜಲು ಬಳಕೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.