ಚೆನ್ನೈ:ಎಂಎಸ್ ಧೋನಿ ನಾಯಕನಾಗಿ ಯುವ ಕ್ರಿಕೆಟಿಗರ ಬೆಳವಣಿಗೆಯ ಜೊತೆಗೆ ಅವರಿಗೆ ಬೆಂಬಲ ನೀಡಿ, ಅವರಲ್ಲಿ ಆತ್ಮ ವಿಶ್ವಾಸ ತುಂಬುತ್ತಿದ್ದರು. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ರೋಹಿತ್ ಶರ್ಮಾ. ಐದಾರು ವರ್ಷಗಳ ಕಾಲ ಭಾರತ ತಂಡದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಅವರ ಮೇಲೆ ಧೋನಿ ಇಟ್ಟಿದ್ದ ನಂಬಿಕೆಯಿಂದಲೇ ಅವರು ಇಂದು ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಆಗಿ ಹೊರ ಹೊಮ್ಮಿದ್ದಾರೆ ಎಂದು ಬದ್ರಿನಾಥ್ ಹೇಳಿದ್ದಾರೆ.
ಧೋನಿ ನಾಯಕತ್ವದಲ್ಲಿ ಆಡಿದ ತಮಿಳುನಾಡಿನ ಸುಬ್ರಮಣಿಯಮ್ ಬದ್ರಿನಾಥ್ ಧೋನಿ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಧೋನಿ ಅವರು ಆಟಗಾರನನ್ನು ನಂಬಿದರೆ ಯಾವುದೇ ಕಾರಣಕ್ಕೂ ಕೈಬಿಡುತ್ತಿರಲಿಲ್ಲ. ಅದೇ ರೀತಿ ಆಟಗಾರನ ಮೇಲೆ ನಂಬಿಕೆ ಇಲ್ಲ ಎಂದರೆ, ಆತನನ್ನು ದೇವರೇ ಬಂದರೂ ಸಹಾಯ ಮಾಡಲಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
" ಧೋನಿ ಯಾವಾಗಲೂ ಕೆಲವು ಪಾತ್ರಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದರು. ನನ್ನನ್ನು ಕೂಡ ಕಠಿಣ ಸಂದರ್ಭದಲ್ಲಿ ತಂಡಕ್ಕೆ ಆಯ್ಕೆ ಮಾಡಿದ್ದರು" ಎಂದು ಬದ್ರಿನಾಥ್ ತಮ್ಮನ್ನು ಮಧ್ಯಮ ಕ್ರಮಾಂಕಕ್ಕೆ ಆಯ್ಕೆ ಮಾಡುತ್ತಿದ್ದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.