ಬರ್ಮಿಂಗ್ಹ್ಯಾಮ್: ಯುವ ಬೌಲರ್ ಶಾಹೀನ್ ಆಫ್ರಿದಿ ದಾಳಿಗೆ ತತ್ತರಿಸಿದ ಕಿವೀಸ್ 50 ಓವರ್ಗಳಲ್ಲಿ 238 ರನ್ಗಳ ಟಾರ್ಗೆಟ್ ನೀಡಿದೆ.
ಟಾಸ್ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಕಿವೀಸ್ ಪಾಕಿಸ್ತಾನದ ಬಿಗು ಬೌಲಿಂಗ್ ದಾಳಿಗೆ ತತ್ತರಿಸಿದ ನ್ಯೂಜಿಲ್ಯಾಂಡ್ ತಂಡ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 237 ರನ್ಗಳಿದೆ.
ಆರಂಭಿಕನಾಗಿ ಕಣಕ್ಕಿಳಿದಿದ್ದ ಮಾರ್ಟಿನ್ ಗಪ್ಟಿಲ್ ಕೇವಲ 5 ರನ್ಗಳಿಸಿ ಅಮೀರ್ಗೆ ವಿಕೆಟ್ ಒಪ್ಪಿಸಿದರೆ, ಮನ್ರೋ 12 ರನ್, ಹಿರಿಯ ಬ್ಯಾಟ್ಸ್ಮನ್ ರಾಸ್ ಟೇಲರ್ 3 ರನ್ , ಲ್ಯಾಥಮ್ 1 ರನ್ಗಳಿಸಿ ಶಾಹೀನ್ ಆಫ್ರಿದಿಗೆ ವಿಕೆಟ್ ಒಪ್ಪಿಸಿದರು.
46ಕ್ಕೆ4 ವಿಕೆಟ್ ಕಳೆದುಕೊಂಡು ನೂರರ ಗಡಿದಾಟಲು ತಿಣುಕಾಡುತ್ತಿದ್ದ ಕಿವೀಸ್ಗೆ ನಾಯಕ ವಿಲಿಯಮ್ಸನ್(41) 5ನೇ ವಿಕೆಟ್ ಜೊತೆಯಾಟದಲ್ಲಿ ನಿಶಾಮ್ ಜೊತೆ ಸೇರಿ 37 ರನ್ಗಳ ಜೊತೆ ಯಾಟ ಸೇರಿಸಿದರು. 41 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ವಿಲಿಯಮ್ಸನ್ ಶದಾಬ್ ಖಾನ್ ಓವರ್ನಲ್ಲಿ ಬೌಲ್ಡ್ ಆದರು.