ಕರ್ನಾಟಕ

karnataka

ETV Bharat / sports

ಚಾಂಪಿಯನ್​ಗಳ ವಿರುದ್ಧ ಭಾರತದ ಸವಾರಿ: ವಿಶ್ವಕಪ್​ ಮೊದಲ ಪಂದ್ಯದಲ್ಲೇ ಆಸೀಸ್​ ಸದೆಬಡಿದ ಮಹಿಳಾ ಪಡೆ! - ಐಸಿಸಿ ಮಹಿಳಾ ವಿಶ್ವಕಪ್​

ಪೂನಂ​ ಯಾದವ್ ಮಾರಕ ಬೌಲಿಂಗ್​ ದಾಳಿಗೆ ತತ್ತರಿಸಿದ ನಾಲ್ಕು ಬಾರಿಯ ವಿಶ್ವ ಚಾಂಪಿಯನ್​ ಆಸ್ಟ್ರೇಲಿಯಾ ವಿಶ್ವಕಪ್​ನ ಮೊದಲ ಟಿ-20 ಪಂದ್ಯದಲ್ಲೇ ಸೋಲು ಕಂಡಿದೆ.

ICC Women's T20 World Cup
ವಿಕೆಟ್​ ಪಡೆದ ಸಂಭ್ರಮದಲ್ಲಿ ಟೀಂ ಇಂಡಿಯಾ

By

Published : Feb 21, 2020, 5:06 PM IST

ಸಿಡ್ನಿ:ಐಸಿಸಿ ಟಿ-20 ವಿಶ್ವಕಪ್​​ನ ಮೊದಲ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಹಾಲಿ ವಿಶ್ವ ಚಾಂಪಿಯನ್​ ಕಾಂಗರೂ ಪಡೆ ಮೇಲೆ ಸವಾರಿ ನಡೆಸಿದ್ದು, 17ರನ್​ಗಳ ಗೆಲುವು ದಾಖಲು ಮಾಡುವ ಮೂಲಕ ಟೂರ್ನಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.

ಭಾರತದ ಪ್ಲೇಯರ್ಸ್​ ಬ್ಯಾಟಿಂಗ್​​

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ 20 ಓವರ್​ಗಳಲ್ಲಿ 4 ವಿಕೆಟ್​ನಷ್ಟಕ್ಕೆ 132ರನ್​ ಗಳಿಕೆ ಮಾಡಿತು. ಬ್ಯಾಟಿಂಗ್​ ವೈಫಲ್ಯದ ನಡುವೆಯೂ ದೀಪ್ತಿ ಶರ್ಮಾ (49*) ಹಾಗೂ ಶಫಾಲಿ ವರ್ಮಾ (29) ಉಪಯುಕ್ತ ಕೊಡುಗೆ ನೀಡಿದರು.

ಮಿಂಚಿದ ದೀಪ್ತಿ ಶರ್ಮಾ

133 ರನ್​ಗಳ ​ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ವಿಕೆಟ್​ ಕಳೆದುಕೊಂಡರೂ ಸುಲಭ ಗೆಲುವು ದಾಖಲು ಮಾಡುವ ಕನಸು ಕಾಣುತ್ತಿತ್ತು. ಆದರೆ, ಇದಕ್ಕೆ ಬ್ರೇಕ್​ ಹಾಕಿದ ಪೂನಂ ಯಾದವ್​ 19ರನ್​ ನೀಡಿ 4ವಿಕೆಟ್​ ಪಡೆದುಕೊಂಡು ಎದುರಾಳಿ ತಂಡಕ್ಕೆ ಬ್ರೇಕ್​ ಹಾಕಿದರು.

ಭಾರತದ ಪ್ಲೇಯರ್ಸ್​ ಬ್ಯಾಟಿಂಗ್​​

ಆರಂಭಿಕ ಆಟಗಾರ್ತಿ ಹೆಲ್ಸ್​​ 51ರನ್​, ಗ್ರೆಂಡ್ನರ್​​ 34ರನ್​​ಗಳಿಕೆ ಮಾಡಿದ್ರೆ, ಉಳಿದ ಯಾವುದೇ ಪ್ಲೇಯರ್​ ಎರಡಂಕ್ಕಿ ರನ್​ಗಳಿಕೆ ಮಾಡಲಿಲ್ಲ. ಹೀಗಾಗಿ ತಂಡ ಕೊನೆಯದಾಗಿ 19.5 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು 115ರನ್​ಗಳಿಕೆ ಮಾಡಿದ್ದರಿಂದ 17ರನ್​ಗಳ ಸೋಲು ಕಾಣುವಂತಾಯಿತು. ಭಾರತದ ಪರ ಮಾರಕ ಬೌಲಿಂಗ್​ ಪ್ರದರ್ಶನ ನೀಡಿದ ಪೂನಂ​ ಯಾದವ್​ 4ವಿಕೆಟ್​ ಪಡೆದುಕೊಂಡರೆ, ಶಿಖಾ ಪಾಂಡೆ 3, ರಾಜೇಶ್ವರಿ ಗಾಯ್ಕವಾಡ್​ 1ವಿಕೆಟ್​ ಪಡೆದುಕೊಂಡರು.

ವಿಕೆಟ್​ ಪಡೆದ ಸಂಭ್ರಮದಲ್ಲಿ ಆಸ್ಟ್ರೇಲಿಯಾ

ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕುವ ವಿಶ್ವಾಸದೊಂದಿಗೆ ಕಣಕ್ಕಿಳಿದಿರುವ ಹರ್ಮನ್​ ಪ್ರೀತ್​ ಕೌರ್​ ತಂಡ ಮೊದಲ ಪಂದ್ಯದಲ್ಲೇ ಗೆಲುವು ದಾಖಲು ಮಾಡುವ ಮೂಲಕ ಪ್ರಶಸ್ತಿ ಗೆಲುವಿನ ಕನಸು ಮತ್ತಷ್ಟು ಇಮ್ಮಡಿಗೊಳಿಸಿಕೊಂಡಿದೆ.

ABOUT THE AUTHOR

...view details