ಕರ್ನಾಟಕ

karnataka

ETV Bharat / sports

ನಾಳೆಯಿಂದ ಐಸಿಸಿ ಮಹಿಳಾ ಟಿ-20 ವಿಶ್ವಕಪ್​​​​ ಆರಂಭ: ಪಂದ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಟಿ-20 ವಿಶ್ವಕಪ್​ ಟೂರ್ನಮೆಂಟ್​ನ ಉದ್ಘಾಟನಾ ಪಂದ್ಯ ಸಿಡ್ನಿ ಶೋಗ್ರೌಂಡ್​ ಸ್ಟೇಡಿಯಂನಲ್ಲಿ ನಡೆಯಲಿದ್ದು, ಫೈನಲ್​ ಪಂದ್ಯ ಪ್ರಸಿದ್ಧ ಮೆಲ್ಬೋರ್ನ್​ ಕ್ರಿಕೆಟ್​ ಗ್ರೌಂಡ್​ನಲ್ಲಿ ಮಾರ್ಚ್​ 8ರಂದು ನಡೆಯಲಿದೆ.

ICC Women's T20 World Cu
ಐಸಿಸಿ ಮಹಿಳಾ ಟಿ20 ವಿಶ್ವಕಪ್

By

Published : Feb 20, 2020, 7:09 PM IST

ಸಿಡ್ನಿ: ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ಶುಕ್ರವಾರದಿಂದ ಆರಂಭವಾಗಲಿರುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್​ನ ಉದ್ಘಾಟನಾ ಪಂದ್ಯದಲ್ಲಿ ಬಲಿಷ್ಠ ಭಾರತದ ಸವಾಲನ್ನು ಎದುರಿಸುತ್ತಿದೆ.

ಟೂರ್ನಮೆಂಟ್​ನ ಉದ್ಘಾಟನಾ ಪಂದ್ಯ ಸಿಡ್ನಿ ಶೋಗ್ರೌಂಡ್​ ಸ್ಟೇಡಿಯಂನಲ್ಲಿ ನಡೆಯಲಿದ್ದು, ಫೈನಲ್​ ಪಂದ್ಯ ಪ್ರಸಿದ್ಧ ಮೆಲ್ಬೋರ್ನ್​ ಕ್ರಿಕೆಟ್​ ಗ್ರೌಂಡ್​ನಲ್ಲಿ ಮಾರ್ಚ್​ 8ರಂದು ನಡೆಯಲಿದೆ.

ಮಹಿಳಾ ಟಿ-20 ವಿಶ್ವಕಪ್

ಆಸ್ಟ್ರೇಲಿಯಾ ತಂಡವನ್ನು ಮೆಗ್​ ಲ್ಯಾನಿಂಗ್​ ಮುನ್ನಡೆಸಲಿದ್ದು, ತವರಿನ ಲಾಭ ಪಡೆದು 5ನೇ ಬಾರಿ ಪ್ರಶಸ್ತಿಯನ್ನು ಎತ್ತಿ ಹಿಡಿಯುವ ಆಲೋಚನೆಯಲ್ಲಿದೆ. ಇತ್ತ ಭಾರತ ಕಳೆದ ವಿಶ್ವಕಪ್​​​ನಂತೆ ಮತ್ತೆ ಆಸೀಸ್​ಗೆ ಶಾಕ್​ ನೀಡಲು ತಯಾರಾಗಿದೆ.

ವಿಶ್ವಕಪ್​ನಲ್ಲಿ ಭಾಗವಹಿಸುವ ತಂಡಗಳು

ಪ್ರಶಸ್ತಿ ಗೆದ್ದ ತಂಡಗಳು?

ಆಸ್ಟ್ರೇಲಿಯಾ ಇಡೀ ಟಿ-20 ಟೂರ್ನಮೆಂಟ್​ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ. ಆಸೀಸ್​ ಮಹಿಳಾ ತಂಡ 2010, 2012, 2014 ಹಾಗೂ 2018ರಲ್ಲಿ ಟಿ-20 ವಿಶ್ವಕಪ್​ಗಳನ್ನು ಗೆದ್ದಿದೆ. ಇನ್ನು 2009ರಲ್ಲಿ ಇಂಗ್ಲೆಂಡ್ ಹಾಗೂ 2016ರಲ್ಲಿ ವೆಸ್ಟ್​ ಇಂಡೀಸ್​ ತಂಡ ತಲಾ ಒಂದು ಬಾರಿ ವಿಶ್ವಕಪ್​ ಎತ್ತಿ ಹಿಡಿದಿವೆ. ​2009 ಹಾಗೂ 2010ರಲ್ಲಿ ನ್ಯೂಜಿಲ್ಯಾಂಡ್​ ತಂಡ ರನ್ನರ್​ ಅಪ್​ ಪ್ರಶಸ್ತಿ ಪಡೆದಿದೆ. ಇನ್ನು ಭಾರತ ತಂಡ 2009, 2010 ಹಾಗೂ 2018ರಲ್ಲಿ ಸೆಮಿಫೈನಲ್​ ಪ್ರವೇಶಿಸಿರುವುದೇ ಅತ್ಯುತ್ತಮ ಸಾಧನೆಯಾಗಿದೆ.

ವಿಶ್ವಕಪ್​ನಲ್ಲಿ ಭಾಗವಹಿಸುವ ತಂಡಗಳು

ಎಷ್ಟು ತಂಡಗಳಿಂದ ಪೈಪೋಟಿ?

ನಾಳೆಯಿಂದ ಶುರುವಾಗಲಿರುವ ವಿಶ್ವಕಪ್​ ಸಮರದಲ್ಲಿ 10 ತಂಡಗಳು ಭಾಗವಹಿಸಲಿವೆ. ಲೀಗ್​ನಲ್ಲಿ ಎರಡು ಗುಂಪುಗಳಿದ್ದು, ತಲಾ 5 ತಂಡಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ತಂಡವೂ ತಲಾ 4 ಲೀಗ್​ ಪಂದ್ಯಗಳನ್ನಾಡಲಿವೆ. ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್​ ಪ್ರವೇಶಿಸಲಿವೆ.

ವಿಶ್ವಕಪ್​ನಲ್ಲಿ ಭಾಗವಹಿಸುವ ತಂಡಗಳು

ಎರಡು ಗುಂಪಿನಲ್ಲಿರುವ ತಂಡಗಳು

ಗ್ರೂಪ್​ ಎ- ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ನ್ಯೂಜಿಲ್ಯಾಂಡ್​, ಶ್ರೀಲಂಕಾ,

ಗ್ರೂಪ್​ ಬಿ- ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​, ಪಾಕಿಸ್ತಾನ, ಥಾಯ್ಲೆಂಡ್​, ವೆಸ್ಟ್​ ಇಂಡೀಸ್​

ವಿಶ್ವಕಪ್​ನಲ್ಲಿ ಭಾಗವಹಿಸುವ ತಂಡಗಳು

ಸಂಪೂರ್ಣ ವೇಳಾಪಟ್ಟಿ:

  • ಫೆ. 21 -ಆಸ್ಟ್ರೇಲಿಯಾ- ಭಾರತ- ಸಿಡ್ನಿ- 1:30ಕ್ಕೆ ಆರಂಭ
  • ಫೆ. 22- ವೆಸ್ಟ್​ ಇಂಡೀಸ್​-ಥಾಯ್ಲೆಂಡ್​ - ಪರ್ತ್​-11:30
  • ಫೆ. 22- ನ್ಯೂಜಿಲ್ಯಾಂಡ್​- ಶ್ರೀಲಂಕಾ- ಪರ್ತ್​-4:30
  • ಫೆ. 23- ಇಂಗ್ಲೆಂಡ್​- ದಕ್ಷಿಣ ಆಫ್ರಿಕಾ-ಪರ್ತ್​-4:30
  • ಫೆ. 24- ಆಸ್ಟ್ರೇಲಿಯಾ- ಶ್ರೀಲಂಕಾ-ಪರ್ತ್​- 11:30
  • ಫೆ. 24- ಭಾರತ- ಬಾಂಗ್ಲಾದೇಶ- ಪರ್ತ್​- 4:30
  • ಫೆ. 26 - ಇಂಗ್ಲೆಂಡ್​- ಥಾಯ್ಲೆಂಡ್​- ಕ್ಯಾನ್ಬೆರಾ- 8:30(ಬೆಳಿಗ್ಗೆ)
  • ಫೆ. 26- ವೆಸ್ಟ್​ ಇಂಡೀಸ್​- ಪಾಕಿಸ್ತಾನ- ಕ್ಯಾನ್ಬೆರಾ-1:30
  • ಫೆ. 27- ಭಾರತ-ನ್ಯೂಜಿಲ್ಯಾಂಡ್​- ಕ್ಯಾನ್ಬೆರಾ- 8:30
  • ಫೆ. 27- ಆಸ್ಟ್ರೇಲಿಯಾ- ಬಾಂಗ್ಲಾದೇಶ- ಕ್ಯಾನ್ಬೆರಾ- 1:30
  • ಫೆ. 28- ದಕ್ಷಿಣ ಆಫ್ರಿಕಾ- ಥಾಯ್ಲೆಂಡ್​- ಕ್ಯಾನ್ಬೆರಾ- 8:30
  • ಫೆ. 28- ಇಂಗ್ಲೆಂಡ್​- ಪಾಕಿಸ್ತಾನ- ಕ್ಯಾನ್ಬೆರಾ- 1:30
  • ಫೆ. 29- ನ್ಯೂಜಿಲ್ಯಾಂಡ್​- ಬಾಂಗ್ಲಾದೇಶ- ಮೆಲ್ನೋರ್ನ್​- 8:30
  • ಫೆ. 29- ಭಾರತ-ಶ್ರೀಲಂಕಾ- ಮೆಲ್ಬೋರ್ನ್​- 1:30
  • ಮಾರ್ಚ್​ 1-ದ.ಆಫ್ರಿಕಾ-ಪಾಕಿಸ್ತಾನ-ಸಿಡ್ನಿ-8:30
  • ಮಾರ್ಚ್ 1- ಇಂಗ್ಲೆಂಡ್​-ವೆಸ್ಟ್​ ಇಂಡೀಸ್​-ಸಿಡ್ನಿ- 1:30
  • ಮಾರ್ಚ್​ 2- ಶ್ರೀಲಂಕಾ- ಬಾಂಗ್ಲಾದೇಶ- ಮೆಲ್ಬೋರ್ನ್​-8:30
  • ಮಾರ್ಚ್​ 2-ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್​- ಮೇಲ್ನೋರ್ನ್​-1:30
  • ಮಾರ್ಚ್ 3- ಪಾಕಿಸ್ತಾನ-ಥಾಯ್ಲೆಂಡ್​- ಸಿಡ್ನಿ- 8:30
  • ಮಾರ್ಚ್ 3- ವೆಸ್ಟ್​ ಇಂಡೀಸ್​-ದ.ಆಫ್ರಿಕಾ-ಸಿಡ್ನಿ-1:30
  • ಮಾರ್ಚ್​ 5 ಸೆಮಿಫೈನಲ್​ 1- ಸಿಡ್ನಿ- 8:30
  • ಮಾರ್ಚ್​ 5- ಸೆಮಿಫೈನಲ್​ 2- ಸಿಡ್ನಿ- 1:30
  • ಮಾರ್ಚ್​ 8- ಫೈನಲ್​- ಮೆಲ್ಬೋರ್ನ್​-1:30

ABOUT THE AUTHOR

...view details