ಕರ್ನಾಟಕ

karnataka

ETV Bharat / sports

ಐಸಿಸಿ ಮಹಿಳಾ ಟಿ-20 ಶ್ರೇಯಾಂಕ: ಅಗ್ರ 10ರೊಳಗೆ ಮಂಧಾನ, ಶೆಫಾಲಿ ಜಮೀಮಾ - ಶೆಫಾಲಿ ವರ್ಮಾ

ಬೌಲರ್ಸ್​ ರ‍್ಯಾಂಕಿಂಗ್​​ನಲ್ಲಿ ದೀಪ್ತಿ ಶರ್ಮಾ ಗರಿಷ್ಠ ಶ್ರೇಯಾಂಕ್ ಪಡೆದಿರುವ ಬೌಲರ್​ ಆಗಿದ್ದಾರೆ. ಅವರು ಪ್ರಸ್ತುತ 6ನೇ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. ಇವರ ನಂತರ ರಾಧಾ ಯಾದವ್​ ಹಾಗೂ ಪೂನಮ್ ಯಾದ್ 7 ಮತ್ತು 8ನೇ ಸ್ಥಾನದಲ್ಲಿದ್ದಾರೆ. ​ ಆಲ್​ರೌಂಡರ್​ ವಿಭಾಗದಲ್ಲಿ ದೀಪ್ತಿ ಶರ್ಮಾ ಅಗ್ರ 10ರಲ್ಲಿರುವ ಏಕೈಕ ಭಾರತೀಯರಾಗಿದ್ದಾರೆ.

ಐಸಿಸಿ ಮಹಿಳಾ ಟಿ20 ಶ್ರೇಯಾಂಕ
ಐಸಿಸಿ ಮಹಿಳಾ ಟಿ20 ಶ್ರೇಯಾಂಕ

By

Published : Oct 1, 2020, 5:28 PM IST

ದುಬೈ:ಭಾರತೀಯ ಬ್ಯಾಟರ್​ಗಳಾದ ಶೆಫಾಲಿ ವರ್ಮಾ, ಸ್ಮೃತಿ ಮಂಧಾನ ಹಾಗೂ ಜಮೀಮಾ ರೋಡ್ರಿಗಸ್​ ಅವರು ಐಸಿಸಿ ಪ್ರಕಟಿಸಿದ ನೂತನ ಟಿ-20 ಶ್ರೇಯಾಂಕ ಪಟ್ಟಿದಲ್ಲಿ ಅಗ್ರ 10ರೊಳಗೆ ಕಾಣಿಸಿಕೊಂಡಿದ್ದಾರೆ.

ಶೆಫಾಲಿ ಮೂರನೇ ಸ್ಥಾನದಲ್ಲಿದ್ದರೆ, ಮಂಧಾನ ಹಾಗೂ ರೋಡ್ರಿಗಸ್​ 7 ಮತ್ತು 9ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಕಿವೀಸ್ ವಿರುದ್ಧದ ಸರಣಿಯಲ್ಲಿ ವೈಫಲ್ಯಕಂಡರೂ ಆಸ್ಟ್ರೇಲಿಯಾ ಬೆತ್ ಮೂನಿ ನಂಬರ್​ ಒನ್ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಐಸಿಸಿ ಮಹಿಳಾ ಟಿ20 ಬ್ಯಾಟಿಂಗ್​ ಶ್ರೇಯಾಂಕ

ಬೌಲರ್ಸ್​ ರ‍್ಯಾಂಕಿಂಗ್​ನಲ್ಲಿ ದೀಪ್ತಿ ಶರ್ಮಾ ಗರಿಷ್ಠ ಶ್ರೇಯಾಂಕ್ ಪಡೆದಿರುವ ಬೌಲರ್​ ಆಗಿದ್ದಾರೆ. ಅವರು ಪ್ರಸ್ತುತ 6ನೇ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. ಇವರ ನಂತರ ರಾಧಾ ಯಾದವ್​ ಹಾಗೂ ಪೂನಮ್ ಯಾದವ್​ 7 ಮತ್ತು 8ನೇ ಸ್ಥಾನದಲ್ಲಿದ್ದಾರೆ. ​ ಆಲ್​ರೌಂಡರ್​ ವಿಭಾಗದಲ್ಲಿ ದೀಪ್ತಿ ಶರ್ಮಾ ಅಗ್ರ 10ರಲ್ಲಿರುವ ಏಕೈಕ ಭಾರತೀಯರಾಗಿದ್ದಾರೆ.

ಐಸಿಸಿ ಮಹಿಳಾ ಟಿ20 ಬೌಲಿಂಗ್​​ ಶ್ರೇಯಾಂಕ

ಇತ್ತೀಚೆಗೆ ಮುಗಿದ ಕಿವೀಸ್​ ವಿರುದ್ಧದ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಆಸ್ಲೇ ಗಾರ್ಡ್ನರ್​ ವೃತ್ತಿ ಜೀವನದ ಗರಿಷ್ಠ 18 ನೇ ಶ್ರೇಯಾಂಕಕ್ಕೆ ಲಗ್ಗೆಯಿಟ್ಟರೆ, ನಾಯಕಿ ಲ್ಯಾನ್ನಿಂಗ್ ಒಂದು ಸ್ಥಾನ ಏರಿಕೆ ಕಂಡು 5 ನೇ ಸ್ಥಾನ ಪಡೆದುಕೊಂಡಿದ್ದಾರೆ. ಕಿವೀಸ್​ ಬ್ಯಾಟರ್​ಗಳಾದ ಸೋಫಿ ಡಿವೈ ಹಾಗೂ ಸೂಜೀ ಬೇಟ್ಸ್​ ಮೊದಲೆರಡು ಸ್ಥಾನದಲ್ಲಿದ್ದಾರೆ.

ABOUT THE AUTHOR

...view details