ಮೆಲ್ಬರ್ನ್( ಆಸ್ಟ್ರೇಲಿಯಾ) : ಭಾರತ- ಆಸ್ಟ್ರೇಲಿಯಾ ನಡುವಿನ ಐಸಿಸಿ ವನಿತೆಯರ ಟ್ವಿಂಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ನಾಲ್ಕು ವಿಕೆಟ್ ನಷ್ಟಕ್ಕೆ 184 ರನ್ ದಾಖಲಿಸಿದೆ. ಈ ಮೂಲಕ ಹರ್ಮನ್ ಪ್ರೀತ್ ಕೌರ್ ಬಳಗದೆದುರು ಕಾಂಗರೂ ಪಡೆ ರನ್ ಶಿಖರವನ್ನೇ ಕಡೆದು ನಿಲ್ಲಿಸಿದೆ.
ಟಿ20 ಮಹಿಳೆಯರ ವಿಶ್ವಕಪ್ ಫೈನಲ್: ಭಾರತಕ್ಕೆ ಗೆಲ್ಲಲು ಬೇಕು 185 ರನ್! - ವನಿತೆಯರ ಟ್ವಿಂಟಿ-20 ವಿಶ್ವಕಪ್ ಟೂರ್ನಿ
ಭಾರತ- ಆಸ್ಟ್ರೇಲಿಯಾ ನಡುವಿನ ಐಸಿಸಿ ವನಿತೆಯರ ಟ್ವಿಂಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ನಡೆಸಿದೆ.
ಮೆಲ್ಬರ್ನ್ ಅಂಗಳದಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಅಲಿಸ್ಸಾ ಹೀಲಿ ಮತ್ತು ಬೆತ್ ಮೂನಿ ಭಾರತೀಯ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿ 153 ರನ್ನುಗಳ ಜೊತೆಯಾಟ ನೀಡಿದರು. ಅಲಿಸ್ಸಾ ಹೀಲಿ 39 ಎಸೆತಗಳನ್ನೆದುರಿಸಿ 75 ರನ್ ಕಲೆ ಹಾಕಿದ್ರೆ, ಬೆತ್ ಮೂನಿ 54 ಎಸೆತಗಳಲ್ಲಿ 78 ರನ್ ಗಳನ್ನು ಕಲೆ ಹಾಕಿ ಅಜೇಯರಾಗುಳಿದರು.
ಭಾರತೀಯ ಬೌಲರ್‌ಗಳಾದ ದೀಪ್ತಿ ಶರ್ಮಾ 2 ವಿಕೆಟ್ ಪಡೆದರೆ, ಪೂನಂ ಯಾದವ್ ಮತ್ತು ರಾಧಾ ಯಾದವ್ ತಲಾ 1 ವಿಕೆಟ್ ಪಡೆದರು. ಇನ್ನು ಶಿಖಾ ಪಾಂಡೆ ನಾಲ್ಕು ಓವರುಗಳಲ್ಲಿ ಬರೋಬ್ಬರಿ 52 ರನ್ನುಗಳನ್ನು ನೀಡಿ ದುಬಾರಿ ಬೌಲರ್ ಎನಿಸಿದರು.