ಕರ್ನಾಟಕ

karnataka

ETV Bharat / sports

ಪಾಕ್​ ವಿರುದ್ಧ 49 ರನ್​ಗಳ ಸೋಲು... ಸೆಮಿ ಫೈನಲ್​ ರೇಸ್​​ನಿಂದ ಹೊರಬಿದ್ದ ದಕ್ಷಿಣ ಆಫ್ರಿಕಾ - ವೆಸ್ಟ್​ ಇಡೀಸ್​

ಪಾಕಿಸ್ತಾನದ ವಿರುದ್ಧ ಎಲ್ಲಾ ವಿಭಾಗದಲ್ಲೂ ಕಳಪೆ ಪ್ರದರ್ಶನ ತೋರಿದ ದಕ್ಷಿಣ ಆಫ್ರಿಕಾ ತಂಡ ಪಾಕ್​ ನೀಡಿದ್ದ 309 ರನ್​ಗಳಿಗೆ ಉತ್ತರವಾಗಿ 259 ರನ್​ಗಳಿಸಷ್ಟೇ ಶಕ್ತವಾಗಿ 49 ರನ್​ಗಳಿಂದ ಸೋಲನುಭವಿಸಿದೆ.

ಆಫ್ರಿಕಾ

By

Published : Jun 23, 2019, 11:19 PM IST

ಲಾರ್ಡ್ಸ್​: ಪಾಕಿಸ್ತಾನ ವಿರುದ್ಧ ಕಳಪೆ ಬ್ಯಾಟಿಂಗ್​, ಬೌಲಿಂಗ್​ ಪ್ರದರ್ಶನ ತೋರಿದ ದಕ್ಷಿಣ ಆಫ್ರಿಕಾ 49 ರನ್​ಗಳಿಂದ ಸೋಲನುಭವಿಸಿ ಸೆಮಿಫೈನಲ್​ ರೇಸ್​ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಇದಲ್ಲದೆ 2003ರ ಬಳಿಕೆ ಮೊದಲ ಬಾರಿಗೆ ಲೀಗ್​ನಲ್ಲೇ ಹೊರಬಿದ್ದ ಅಪಮಾನಕ್ಕೆ ತುತ್ತಾಗಿದೆ.

ಪಾಕಿಸ್ತಾನ ನೀಡಿದ್ದ 309 ರನ್​ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ 50 ಓವರ್​ಗಳಲ್ಲಿ 259 ರನ್​ಗಳಿಗೆ ಆಲೌಟ್​ ಆಗುವ ಮೂಲಕ 49 ರನ್​ಗಳಿಂದ ಸೋಲೊಪ್ಪಿಕೊಂಡಿತು.

309 ರನ್​ಗಳ ಬೃಹತ್​ ಗುರಿ ಪಡೆದಿದ್ದ ಆಫ್ರಿಕಾ ಎರಡನೇ ಓವರ್​ನಲ್ಲೇ ಹಾಶಿಮ್​ ಆಮ್ಲ(2) ವಿಕೆಟ್​ ಕಳೆದುಕೊಂಡು ಆಘಾತ ಎದುರಿಸಿತು. ನಂತರ ಡಿಕಾಕ್​ ಜೊತೆಗೂಡಿದ ಪ್ಲೆಸಿಸ್​ 2ನೇ ವಿಕೆಟ್​ ಜೊತೆಯಾಟದಲ್ಲಿ 87 ರನ್​ಗಳಿಸಿ ತಂಡಕ್ಕೆ ಚೇತರಿಕೆ ನೀಡದರು. ಈ ಹಂತದಲ್ಲಿ 60 ಎಸೆತಗಳಲ್ಲಿ 2 ಸಿಕ್ಸರ್​ ಹಾಗೂ 3 ಬೌಂಡರಿ ನೆರವಿನಿಂದ 47 ರನ್​ಗಳಿಸಿದ್ದ ಡಿಕಾಕ್, ಶದಾಬ್​ ಖಾನ್​ಗೆ ವಿಕೆಟ್​ ಒಪ್ಪಿಸಿದರೆ, ಮ್ಯಾರ್ಕ್ರಮ್​(7) ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿಕೊಂಡರು.

79 ಎಸೆತಗಳಲ್ಲಿ 5 ಬೌಂಡರಿ ಸಹಿತ 63 ರನ್​ಗಳಿಸಿ ಉತ್ತಮವಾಗಿ ಆಡುತ್ತಿದ್ದ ನಾಯಕ ಪ್ಲೆಸಿಸ್​ ಅಮೀರ್​ ಬೌಲಿಂಗ್​ ನಲ್ಲಿ ಔಟಾದರು. ಫ್ಲೆಸಿಸ್​ ಔಟಾಗುತ್ತಿದ್ದ ದಕ್ಷಿಣ ಆಫ್ರಿಕಾದ ರನ್​ಗತಿ ಇಳಿಮುಖವಾಗುವುದರ ಜೊತೆಗೆ ನಿರಂತರವಾಗಿ ವಿಕೆಟ್​ ಕೂಡ ಕಳೆದುಕೊಂಡಿತು. ಡಾಸ್ಸೆನ್​ 36, ಮಿಲ್ಲರ್​ 31 ಹಾಗೂ ಪೆಹ್ಲುಕ್ವಾಯೋ ಔಟಾಗದೆ 46 ರನ್​ಗಳಿಸಲಷ್ಟೇ ಕೊಂಚ ಪ್ರತಿರೋದ ನೀಡಿದರಾದರೂ ದೊಡ್ಡ ಮೊತ್ತಗಳಿಸಲು ವಿಫಲರಾದರು. ಬಾಲಂಗೋಚಿಗಳಾದ ಮೋರಿಸ್​ 16, ರಬಾಡ 3, ಎನ್​ಗಿಡಿ 1 ರನ್​ಗಳಿಸಿ ಔಟಾದರು.

ಪಾಕಿಸ್ತಾನದ ಪರ ಅಮೀರ್​ 2, ಶದಾಬ್​ ಖಾನ್​ 3 ಹಾಗೂ ವಹಾಬ್​ ರಿಯಾಜ್​ 3 ವಿಕೆಟ್​ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾವನ್ನು 259 ರನ್​ಗಳಿಗೆ ಆಲೌಟ್​ ಮಾಡಿದರು.

ಇದಕ್ಕೂ ಮೊದಲು ಬ್ಯಾಟಿಂಗ್​ ಮಾಡಿದ ಪಾಕಿಸ್ತಾನ ತಂಡಕ್ಕೆ ಬಾಬರ್​ ಅಜಂ 69, ಹ್ಯಾರೀಸ್​ ಸೋಹೈಲ್​ 89, ಇಮಾಮ್​ ಹಲ್​ ಹಕ್​ 44, ಫಖರ್​ ಜಮಾನ್​ 44 ರನ್​ಗಳಿಂದ 50 ಓವರ್​ಗಳಲ್ಲಿ 308 ರನ್​ಗಳಿಸಿತ್ತು.

ಈ ಸೋಲಿನ ಮೂಲಕ ದಕ್ಷಿಣ ಆಫ್ರಿಕಾ ಅಫ್ಘಾನಿಸ್ತಾನದ ನಂತರ ಸೆಮಿಫೈನಲ್​ ರೇಸ್​ನಿಂದ ಹೊರಬಿದ್ದಿತು. ಈ ಗೆಲುವಿನೊಂದಿಗೆ ಪಾಕಿಸ್ತಾನ ತಂಡ ಸೆಮಿಫೈನಲ್​ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.

ABOUT THE AUTHOR

...view details