ಮುಂಬೈ: ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಅಂಡರ್-19 ವಿಶ್ವಕಪ್ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಭಾರತೀಯ ತಂಡ ಜನವರಿ 19 ರಂದು ಶ್ರೀಲಂಕಾ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿ ಸೆಣಸಲಿದೆ.
ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿರುವ ಪ್ರಿಯಂ ಗರ್ಗ್ ಪಡೆ ಭಾರತಕ್ಕೆ 5ನೇ ವಿಶ್ವಕಪ್ ತಂದುಕೊಡುವ ತವಕದಲ್ಲಿದ್ದು ಜನವರಿ 19ರಿಂದ ಶ್ರೀಲಂಕಾ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈ ಟೂರ್ನಿಯಲ್ಲಿ ಭಾಗವಹಿಸುವ 16 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಸೂಪರ್ ಲೀಗ್ ಹಂತ ಪ್ರವೇಶಿಸಲಿವೆ.
ದಕ್ಷಿಣ ಆಫ್ರಿಕಾ ಏಕದಿನ ಸರಣಿ ಹಾಗೂ ಜಿಂಬಾಬ್ವೆ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ ಒಳಗೊಂಡ ಚತುಷ್ಕೋನ ಸರಣಿ ಗೆದ್ದುಕೊಂಡಿರುವ ಭಾರತೀಯ ತಂಡ ಉತ್ತಮ ಸದ್ಯ ಲಯದಲ್ಲದೆ. ಎ ಗುಂಪಿನಲ್ಲಿರುವ ಗರ್ಗ್ ಪಡೆ ಲೀಗ್ ಹಂತದ ಹೋರಾಟದಲ್ಲಿ ಲಂಕಾ, ಜಪಾನ್, ನ್ಯೂಜಿಲ್ಯಾಂಡ್ ತಂಡಗಳೊಂದಿಗೆ ಸ್ಪರ್ಧಿಸಲಿದೆ.
ಭಾರತ ಅಂಡರ್- 19 ತಂಡದ ವೇಳಾಪಟ್ಟಿ ಇಂತಿದೆ: