ಮುಂಬೈ:ಭಾರತ ತಂಡದ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅನಿರೀಕ್ಷಿತ ಸೋಲುಕಂಡು ನಿರಾಶೆ ಅನುಭವಿಸಿದರೂ, ವೈಯಕ್ತಿಕ ರನ್ಗಳಿಕೆ ಹಾಗೂ ವಿಕೆಟ್ಗಳಿಕೆಯಲ್ಲಿ ಮೊದಲ ಸ್ಥಾನ ಪಡೆದಿರುವುದು ಸಮಾಧಾನಕರ ಸಂಗತಿಯಾಗಿದೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬ್ಯಾಟ್ಸ್ಮನ್ಗಳ ವೈಫಲ್ಯದಿಂದ ಭಾರತ ತಂಡ 177 ರನ್ಗಳಿಗೆ ಆಲೌಟ್ ಆಯಿತು. ಯಶಸ್ವಿ ಜೈಸ್ವಾಲ್ ಮಾತ್ರ 88 ರನ್ಗಳಿಸಿ ಉತ್ತಮ ಪ್ರದರ್ಶನ ತೋರಿದರೆ, ಉಳಿದ ಬ್ಯಾಟ್ಸ್ಮನ್ಗಳು ರನ್ಗಳಿಸಲು ವಿಫಲರಾದರು. 178 ರನ್ಗಳ ಗುರಿ ಪಡೆದಿದ್ದ ಬಾಂಗ್ಲಾ ರವಿ ಬಿಷ್ನೋಯಿ ಅವರ ಮಾರಕ ದಾಳಿಯ ಹೊರತಾಗಿಯೂ 3 ವಿಕೆಟ್ಗಳ ಸೋಲುಕಂಡಿತು.
ಆದರೆ, ಭಾರತ ತಂಡದ ಯಶಸ್ವಿ ಜೈಸ್ವಾಲ್ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದರು. ಜೈಸ್ವಾಲ್ ಟೂರ್ನಿಯಲ್ಲಿ 400 ರನ್ಗಳಿಸಿದ್ದಾರೆ. ಪಂದ್ಯಗಳಿಂದ ಅವರು 4 ಅರ್ಧಶತಕ ಹಾಗೂ ಒಂದು ಶತಕ ಸಿಡಿಸಿದ್ದಾರೆ.
ಇನ್ನು ಬೌಲಿಂಗ್ನಲ್ಲಿ ಕಮಾಲ್ ಮಾಡಿರುವ ಬಿಷ್ನೋಯಿ 6 ಪಂದ್ಯಗಳಿಂದ 17 ವಿಕೆಟ್ ಪಡೆಯುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತದ ಯಾವುದೇ ಬೌಲರ್ ಈ ಹಿಂದಿನ ಅಂಡರ್ 19 ವಿಶ್ವಕಪ್ನಲ್ಲಿ 14 ವಿಕೆಟ್ಗಿಂತ ಹೆಚ್ಚು ವಿಕೆಟ್ ಪಡೆದಿರಲಿಲ್ಲ. ಇದೀಗ 17 ವಿಕೆಟ್ ಪಡೆದಿರುವ ಬಿಷ್ನೋಯಿ ಹೊಸ ದಾಖಲೆ ಬರೆದಿದ್ದಾರೆ.