ಮುಂಬೈ: ಮೊದಲ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಎರಡು ಇನ್ನಿಂಗ್ಸ್ಗಳಲ್ಲೂ ಅಮೋಘ ಶತಕ ಬಾರಿಸಿದ ಸ್ಟಿವ್ ಸ್ಮಿತ್ 46 ರೇಟಿಂಗ್ ಅಂಕ ಪಡೆದು ಮೂರನೇ ಸ್ಥಾನಕ್ಕೇರಿದ್ದಾರೆ.
ಟೆಸ್ಟ್ ಶ್ರೇಯಾಂಕ: ಕೊಹ್ಲಿ ಅಗ್ರಸ್ಥಾನಕ್ಕಿಲ್ಲ ದಕ್ಕೆ, 3ನೇ ಸ್ಥಾನಕ್ಕೇರಿದ ಸ್ಮಿತ್ - ಕೊಹ್ಲಿ ಮೊದಲ ಸ್ಥಾನ
ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 2 ಶತಕ ಬಾರಿಸಿದ ಸ್ಟಿವ್ ಸ್ಮಿತ್ ಮೂರನೇ ಸ್ಥಾನಕ್ಕೇರಿದ್ದಾರೆ. ಕೊಹ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
2017 ರಲ್ಲಿ ಮೊದಲ ಸ್ಥಾನದಲ್ಲಿದ್ದ ವೇಳೆ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಸಿಲುಕಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದ ಸ್ಮಿತ್ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದರು. ಆದರೆ, ಮೊದಲ ಆ್ಯಶಸ್ ಟೆಸ್ಟ್ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದು, ಮೊದಲ ಇನ್ನಿಂಗ್ಸ್ನಲ್ಲಿ 144 ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 142 ರನ್ಗಳಿಸಿದ್ದರು. ಇದೀಗ ಬಿಡುಗಡೆಯಾದ ನೂತನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 46 ರೇಟಿಂಗ್ ಅಂಕ ಪಡೆದು ಭಾರತದ ಚೇತೇಶ್ವರ್ ಪೂಜಾರರನ್ನು ಹಿಂದಿಕ್ಕಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ.
ಈ ಸರಣಿಗೂ ಮುನ್ನ 857 ರೇಟಿಂಗ್ ಪಾಯಿಂಟ್ ಹೊಂದಿದ್ದ ಸ್ಮಿತ್ ಮೊದಲ ಪಂದ್ಯದ ನಂತರ 903 ಅಂಕಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿರುವ ಕೊಹ್ಲಿ 922 ಅಂಕ ಹೊಂದಿದ್ದರೆ, ಎರಡನೇ ಸ್ಥಾನದಲ್ಲಿರುವ ಕೇನ್ ವಿಲಿಯಮ್ಸನ್ 913 ಅಂಕ ಹೊಂದಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಪೂಜಾರ, 5ನೇ ಸ್ಥಾನದಲ್ಲಿ ಹೆನ್ರಿ ನಿಕೋಲ್ಸ್ ಇದ್ದಾರೆ.