ಮುಂಬೈ: ಹರಿಣಗಳ ವಿರುದ್ಧ ಇನ್ನು ಒಂದು ಪಂದ್ಯವಿರುವಂತೆಯೇ ಟೆಸ್ಟ್ ಸರಣಿ ಗೆಲ್ಲಲೂ ನೆರವಾದ ಭಾರತ ತಂಡದ ಹಿರಿಯ ಬೌಲರ್ ಆರ್ ಅಶ್ವಿನ್ ಮರಳಿ ಟಾಪ್ 10ಗೆ ಎಂಟ್ರಿಕೊಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಮೊದಲು 14 ಸ್ಥಾನದಲ್ಲಿದ್ದ ಅಶ್ವಿನ್ ಮೊದಲ ಪಂದ್ಯದಲ್ಲಿ 10ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದರು. ಇದೀಗ ಎರಡನೇ ಟೆಸ್ಟ್ನಲ್ಲೂ 6 ವಿಕೆಟ್ ಪಡೆದು ಮಿಂಚಿದ್ದರಿಂದ ಮತ್ತೆ 3 ಸ್ಥಾನ ಏರಿಕೆ ಕಂಡು 7ನೇ ಸ್ಥಾನ ಅಲಂಕರಿಸಿದ್ದಾರೆ.
ಇನ್ನು ಭಾರತದ ಟಾಪ್ ವೇಗಿ ಜಸ್ಪ್ರೀತ್ ಬುಮ್ರಾ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಹಾಗೂ ರಬಡಾ ಮೊದಲೆರಡು ಸ್ಥಾನದಲ್ಲಿದ್ದಾರೆ.
ಇನ್ನು ಆಲ್ರೌಂಡರ್ ವಿಭಾಗದಲ್ಲಿ ರವೀಂದ್ರ ಜಡೇಜಾ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆದರೆ ಬೌಲಿಂಗ್ ಶ್ರೇಯಾಂಕದಲ್ಲಿ 14 ನೇಸ್ಥಾನಕ್ಕೆ ಕುಸಿದಿದ್ದಾರೆ. ಇಶಾಂತ್ ಶರ್ಮಾ 21ನೇ ಸ್ಥಾನಕ್ಕೆ ಕುಸಿತ ಕಂಡಿರೆ, ಶಮಿ 16ನೇ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ. ಇನ್ನು 2ನೇ ಟೆಸ್ಟ್ನಲ್ಲಿ 6 ವಿಕೆಟ್ ಪಡೆದಿದ್ದ ಉಮೇಶ್ ಯಾದವ್ 25ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ಈ ನಡುವೆ ರವೀಂದ್ರ ಜಡೇಜಾ 14 ಹಾಗೂ ಇಶಾಂತ್ ಶರ್ಮಾ 21ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಅತ್ತ ಮೊಹಮ್ಮದ್ ಶಮಿ 16ನೇ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ. ಇನ್ನು ಉಮೇಶ್ ಯಾದವ್ 25ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.