ಕರ್ನಾಟಕ

karnataka

ETV Bharat / sports

ಮ್ಯಾಚ್​ ಫಿಕ್ಸಿಂಗ್​: ಇಬ್ಬರು ಯುಎಇ ಆಟಗಾರರಿಗೆ 8 ವರ್ಷ ನಿಷೇಧ ಹೇರಿದ ಐಸಿಸಿ

ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯದ ವೇಳೆ ಮ್ಯಾಚ್​ ಫಿಕ್ಸಿಂಗ್​ನಲ್ಲಿ ಭಾಗಿಯಾದ ಆರೋಪ ಸಾಬೀತುಗೊಂಡಿರುವ ಕಾರಣ ಯುಎಇ ತಂಡದ ಇಬ್ಬರು ಪ್ಲೇಯರ್ಸ್​ಗಳಿಗೆ ಐಸಿಸಿ 8 ವರ್ಷಗಳ ನಿಷೇಧ ಹೇರಿದೆ.

UAE player Naveed
UAE player Naveed

By

Published : Mar 16, 2021, 6:36 PM IST

ದುಬೈ:ಯುನೈಟೆಡ್​ ಅರಬ್​ ಎಮಿರೇಟ್ಸ್​​(ಯುಎಇ) ಕ್ರಿಕೆಟಿಗರಾದ ಮೊಹಮ್ಮದ್​​ ನವೀದ್​ ಮತ್ತು ಶೈಮಾನ್​​ ಅನ್ವರ್​ ಬಟ್​​ ಅವರಿಗೆ 8 ವರ್ಷಗಳ ನಿಷೇಧ ಹೇರಿ ಐಸಿಸಿ ಮಹತ್ವದ ನಿರ್ಧಾರ ಪ್ರಕಟಿಸಿದೆ. 2019ರಲ್ಲಿ ನಡೆದಿದ್ದ ಟಿ-20 ವಿಶ್ವಕಪ್​ ಅರ್ಹತಾ ಪಂದ್ಯಗಳ ಸಂದರ್ಭದಲ್ಲಿ ಇವರು ಮ್ಯಾಚ್​ ಫಿಕ್ಸಿಂಗ್​ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ವಿರೋಧಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ಅವರನ್ನು 2019ರಲ್ಲಿ ಅಮಾನತು ಮಾಡಲಾಗಿತ್ತು. ಹೀಗಾಗಿ 2019ರ ಅಕ್ಟೋಬರ್​​ 16ದಿಂದಲೇ ಈ ನಿಷೇಧ ಜಾರಿಗೊಳ್ಳಲಿದೆ.

ಇದನ್ನೂ ಓದಿ: ವಿರಾಟ್​ ರೀತಿ ಇಶಾನ್​ ಕಿಶನ್​, ರಿಷಭ್​ ಪಂತ್​ ಗೇಮ್​ ಫಿನಿಶರ್​ ಆಗಲಿ: ಸೆಹ್ವಾಗ್​

ಯುಎಇ ತಂಡದ ಮಾಜಿ ಕ್ಯಾಪ್ಟನ್​​ ಆಗಿರುವ ಮೊಹಮ್ಮದ್​ ನವೀದ್​ ಹಾಗೂ ಆರಂಭಿಕ ಬ್ಯಾಟ್ಸ್‌ಮನ್​​ ಶೈಮಾನ್​​ ಅನ್ವರ್​​ ಐಸಿಸಿ ಆರ್ಟಿಕಲ್​​ 2.1.1 ಪ್ರಕಾರ ತಪ್ಪಿತಸ್ಥರು ಎಂದು ಸಾಬೀತುಗೊಂಡಿದೆ. ನವೀದ್​ ಯುಎಇ ಪರ 39 ಏಕದಿನ ಪಂದ್ಯ, 31 ಟಿ20 ಪಂದ್ಯಗಳನ್ನಾಡಿದ್ದು, ಶೈಮಾನ್​​ 40 ಏಕದಿನ ಹಾಗೂ 32 ಟಿ-20 ಪಂದ್ಯಗಳನ್ನಾಡಿದ್ದಾರೆ.

ABOUT THE AUTHOR

...view details