ಕರ್ನಾಟಕ

karnataka

ETV Bharat / sports

ಏಕದಿನ ಬೌಲಿಂಗ್ ರ್‍ಯಾಂಕ್: ಬುಮ್ರಾ ಹಿಂದಿಕ್ಕಿದ ಹೆನ್ರಿ, 11ನೇ ರ್‍ಯಾಂಕ್​ಗೆ ಬಡ್ತಿ ಪಡೆದ ಭುವಿ

ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಕನ್ನಡಿಗ ರಾಹುಲ್​ 31ರಿಂದ 27, ಹಾರ್ದಿಕ್ ಪಾಂಡ್ಯ ವೃತ್ತಿಜೀವನದ ಶ್ರೇಷ್ಠ 42 ಸ್ಥಾನ ಪಡೆದರೆ, ರಿಷಭ್ ಪಂತ್ ಟಾಪ್ 100ಗೆ ಪ್ರವೇಶಿಸಿದ್ದಾರೆ.

ಐಸಿಸಿ ಏಕದಿನ ಬೌಲಿಂಗ್ ರ್‍ಯಾಂಕ್
ಭುನವನೇಶ್ವರ್ ಕುಮಾರ್

By

Published : Mar 31, 2021, 4:41 PM IST

ದುಬೈ: ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಯಶಸ್ವಿಯಾಗಿ ಕಮ್​ಬ್ಯಾಕ್ ಮಾಡಿದ್ದ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಐಸಿಸಿ ಏಕದಿನ ಶ್ರೇಯಾಂಕದಲ್ಲಿ 9 ಸ್ಥಾನಗಳ ಏರಿಕೆ ಕಂಡು 11 ರ್‍ಯಾಂಕ್ ಪಡೆದಿದ್ದಾರೆ. ಇದು 2017ರ ನಂತರ ಅವರು ಪಡೆದ ಅತ್ಯುತ್ತಮ ಶ್ರೇಯಾಂಕವಾಗಿದೆ.

ಕೊನೆಯ ಏಕದಿನ ಪಂದ್ಯದಲ್ಲಿ 3 ವಿಕೆಟ್​ ಸೇರಿದಂತೆ ಭುವನೇಶ್ವರ್ ಕುಮಾರ್ ಸರಣಿಯಲ್ಲಿ 6 ವಿಕೆಟ್ ಪಡೆದಿದ್ದರು. 8 ವಿಕೆಟ್ ಪಡೆದಿದ್ದ ಶಾರ್ದುಲ್ ಠಾಕೂರ್ 93ರಿಂದ 80ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಮೊದಲೆರಡು ಪಂದ್ಯದಲ್ಲಿ 6 ವಿಕೆಟ್ ಪಡೆದಿದ್ದ ಮ್ಯಾಟ್​ ಹೆನ್ರಿ 5 ಸ್ಥಾನಗಳ ಏರಿಕೆ ಕಂಡಿದ್ದು, ಭಾರತದ ಬುಮ್ರಾರನ್ನು ಹಿಂದಿಕ್ಕಿ 3ನೇ ಸ್ಥಾನ ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿ ಕಿವೀಸ್​ನವರೇ ಆದ ಬೌಲ್ಟ್​, 2ರಲ್ಲಿ ಅಫ್ಘಾನಿಸ್ತಾನದ ಮುಜೀಬ್ ಇದ್ದಾರೆ. ವಿರಾಟ್​ ಕೊಹ್ಲಿ, ಬಾಬರ್ ಅಜಮ್ ಮತ್ತು ರೋಹಿತ್ ಶರ್ಮಾ ಮೊದಲ 3 ಸ್ಥಾನದಲ್ಲಿದ್ದಾರೆ.

ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಕನ್ನಡಿಗ ರಾಹುಲ್​ 31ರಿಂದ 27, ಹಾರ್ದಿಕ್ ಪಾಂಡ್ಯ ವೃತ್ತಿಜೀವನದ ಶ್ರೇಷ್ಠ 42 ಸ್ಥಾನ ಪಡೆದರೆ, ರಿಷಭ್ ಪಂತ್ ಟಾಪ್ 100ಗೆ ಪ್ರವೇಶಿಸಿದ್ದಾರೆ.

ಇಂಗ್ಲೆಂಡ್​ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ 4 ಸ್ಥಾನ ಬಡ್ತಿ ಪಡೆದು 24 ಹಾಗೂ ಆಲ್​ರೌಂಡರ್​ ರ್ಯಾಂಕಿಂಗ್​ನಲ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ. ಜಾನಿ ಬೈರ್​ಸ್ಟೋವ್​ 7ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸ್ಮಿತ್​ ಅಲ್ಲ, ಈತ ಆಸ್ಟ್ರೇಲಿಯಾದ ಕ್ಯಾಪ್ಟನ್ ಆಗಬೇಕು: ಮೈಕಲ್​ ಕ್ಲಾರ್ಕ್

ABOUT THE AUTHOR

...view details