ನವದೆಹಲಿ :ಭಾರತದಲ್ಲಿ ನಡೆಯಬೇಕಿರುವ ಐಸಿಸಿ ಟಿ20 ವಿಶ್ವಕಪ್ಗೆ ಬೋರ್ಡ್ ಬ್ಯಾಕ್ಅಪ್ ಯೋಜನೆಗಳನ್ನು ಹೊಂದಿದೆ. ಆದರೆ, ಪ್ರಸ್ತುತ ಕೋವಿಡ್-19 ಪ್ರಕರಣಗಳು ಹೆಚ್ಚಾಗಿದ್ದರೂ ವಿಶ್ವಕಪ್ನ ಭಾರತದಿಂದ ಹೊರಗೆ ಆಯೋಜಿಸುವ ಯಾವುದೇ ಆಲೋಚನೆಗಳನ್ನು ಹೊಂದಿಲ್ಲ ಎಂದು ಐಸಿಸಿ ಹಂಗಾಮಿ ಸಿಇಒ ಜೆಫ್ ಅಲಾರ್ಡಿಸ್ ಬುಧವಾರ ಹೇಳಿದ್ದಾರೆ.
ಟೂರ್ನಮೆಂಟ್ ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ಆಯೋಜನೆಗೊಂಡಿದೆ. ಆದರೆ, ಕಳೆದ ಒಂದು ವಾರದಿಂದ ಭಾರತದಲ್ಲಿ ಪ್ರತಿದಿನ ಲಕ್ಷಕ್ಕೂ ಹೆಚ್ಚು ಪ್ರಕರಣ ಕಂಡು ಬರುತ್ತಿವೆ. ಕೋವಿಡ್ ಮಧ್ಯೆಯೂ ಇದೇ ಶುಕ್ರವಾರದಿಂದ ಚೆನ್ನೈನಲ್ಲಿ ಐಪಿಎಲ್ ಆರಂಭವಾಗುತ್ತಿದೆ.
"ನಾವು ಖಂಡಿತವಾಗಿಯೂ ಯೋಜಿಸಿದಂತೆ ಈ ಇವೆಂಟ್ನೊಂದಿಗೆ ಮುಂದುವಿರಿಯುತ್ತಿದ್ದೇವೆ. ನಾವು ಪ್ಲಾನ್ ಬಿ ಹೊಂದಿದ್ದೇವೆ. ಆದರೆ, ನಾವು ಇನ್ನೂ ಆ ಯೋಜನೆಗಳನ್ನು ಸಕ್ರಿಯಗೊಳಿಸಿಲ್ಲ. ನಾವು ಬಿಸಿಸಿಐನೊಂದಿಗೆ ಕೆಲಸ ಮಾಡುತ್ತಿದ್ದೇವೆ. ಅಂತಹ ಸಮಯ ಬಂದರೆ ನಮ್ಮ ಬ್ಯಾಕ್ಅಪ್ ಪ್ಲಾನ್ಗಳನ್ನು ಸಕ್ರಿಯಗೊಳಿಸುತ್ತೇವೆ" ಎಂದು ಅಲಾರ್ಡಿಸ್ ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.