ಮುಂಬೈ:ಭಾರತದ ನಂಬಿಕಸ್ಥ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಐಸಿಸಿ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶ್ರೇಯಾಂಕದಲ್ಲೇ ತಮ್ಮ ಆದಿಪತ್ಯ ಮುಂದುರಿವಸಿದ್ದಾರೆ.
ಸೋಮವಾರ ಐಸಿಸಿ ಏಕದಿನ ಬ್ಯಾಟಿಂಗ್ ಹಾಗೂ ಬೌಲಿಂಗ್ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತದ ಕೊಹ್ಲಿ ಹಾಗೂ ರೋಹಿತ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮೊದಲೆರಡು ಸ್ಥಾನಗಳಲ್ಲಿದ್ದು, ಅವರು ಕ್ರಮವಾಗಿ 886 ಹಾಗೂ 868 ರೇಟಿಂಗ್ ಪಾಯಿಂಟ್ಗಳನ್ನು ಪಡೆದಿದ್ದಾರೆ. ಈ ಇಬ್ಬರು ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಬೆನ್ನಲ್ಲೇ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು, ಭಾರತದ ವಿರುದ್ಧ ಏಕದಿನ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಆರನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದರೆ, ನಾಯಕ ಆ್ಯರೋನ್ ಫಿಂಚ್ ಟಾಪ್ 10 ಪಟ್ಟಿಗೆ ಮರಳಿದ್ದಾರೆ. ಪಾಕಿಸ್ತಾನದ ಬಾಬರ್ ಅಜಮ್, ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್, ಕಿವೀಸ್ನ ರಾಸ್ ಟೇಲರ್ ಟಾಪ್ 5ರಲ್ಲಿದ್ದಾರೆ.
ಶಿಖರ್ ಧವನ್ ಏಳು ಸ್ಥಾನಗಳ ನೆಗೆತ ಕಂಡು 15ನೇ ಸ್ಥಾನಕ್ಕೆ, 21 ಸ್ಥಾನಗಳ ಬಡ್ತಿ ಪಡೆದಿರುವ ರಾಹುಲ್ 50ನೇ ಸ್ಥಾನ ಪಡೆದಿದ್ದಾರೆ.
ಬೌಲಿಂಗ್ ರ್ಯಾಂಕಿಂಗ್ನಲ್ಲಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಟ್ರೆಂಟ್ ಬೋಲ್ಟ್, ಮುಜೀಬ್ ಉರ್ ರಹಮಾನ್, ಕಹಿಸೋ ರಬಾಡ, ಪ್ಯಾಟ್ ಕಮ್ಮಿನ್ಸ್ ಮೊದಲ 5 ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿರುವ ರವೀಂದ್ರ ಜಡೇಜಾ ಟಾಪ್ 10 ಪಟ್ಟಿಗೆ ಲಗ್ಗೆಯಿಟ್ಟಿದ್ದಾರೆ.