ಕರ್ನಾಟಕ

karnataka

ETV Bharat / sports

ರಾಹುಲ್​ ದ್ರಾವಿಡ್​ ಎಡಗೈ ಬ್ಯಾಟ್ಸ್​​ಮನ್​ ಎಂದು ಬರೆದು ಟ್ರೋಲ್​ಗೆ ತುತ್ತಾದ ಐಸಿಸಿ - ದಿ ವಾಲ್

ರಾಹುಲ್​ ದ್ರಾವಿಡ್​ರನ್ನು ಎಡಗೈ ಬ್ಯಾಟ್ಸ್​ಮನ್​ ಎಂದು ಐಸಿಸಿ ತನ್ನ ಹಾಲ್​ ಆಫ್​ ಫೇಮ್​ ಲಿಸ್ಟ್​ನಲ್ಲಿ ಉಲ್ಲೇಖಿಸುವ ಮೂಲಕ ಬೇಜವಾಬ್ದಾರಿತನ ತೋರಿರುವುದಕ್ಕೆ ಭಾರತೀಯ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Rahul Dravid

By

Published : Sep 21, 2019, 8:49 AM IST

ಮುಂಬೈ:ವಿಶ್ವಕ್ರಿಕೆಟ್​ ಕಂಡಂತಹ ಶ್ರೇಷ್ಠ ಟೆಸ್ಟ್​ ಬ್ಯಾಟ್ಸ್​ಮನ್​ ರಾಹುಲ್​ ದ್ರಾವಿಡ್​ ಅವರನ್ನು ಎಡಗೈ ಬ್ಯಾಟ್ಸ್​ಮನ್​ ಎಂದು ಐಸಿಸಿ ತನ್ನ ಹಾಲ್​ ಆಫ್​ ಫೇಮ್​ ಲಿಸ್ಟ್​ನಲ್ಲಿ ಬರೆದುಕೊಂಡಿರುವುದಕ್ಕೆ ಭಾರತೀಯ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ತಂಡದ ಪರ 16 ವರ್ಷಗಳ ಕಾಲ ಕ್ರಿಕೆಟ್​ ಆಡಿರುವ ದಿ ವಾಲ್​ ನಾಯಕನಾಗಿ, ಒಬ್ಬ ಬ್ಯಾಟ್ಸ್​ಮನ್​ ಹಾಗೂ ವಿಕೆಟ್​ ಕೀಪರ್​ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ದ್ರಾವಿಡ್​ ಅಂತಹ ಆಟಗಾರರನ್ನು ಯಾವ ರೀತಿಯ ಬ್ಯಾಟ್ಸ್​ಮನ್​ ಎಂಬುದನ್ನು ಸರಿಯಾಗಿ ತಿಳಿಸದ ಐಸಿಸಿ ಬೇಜವಾಬ್ದಾರಿತನ ಕುರಿತು ಕೆಲವು ಭಾರತೀಯ ಅಭಿಮಾನಿಗಳಿಂದ ಅಸಮಾಧಾನ ವ್ಯಕ್ತವಾಗುತ್ತಿದೆ.

ದ್ರಾವಿಡ್​ ಅವರಿಗೆ ಐಸಿಸಿ ಕಳೆದ ವರ್ಷ ಆಲ್​ ಆಫ್​ ಫೇಮ್​ ಗೌರವ ನೀಡಿತ್ತು. ಬಿಷನ್​ ಸಿಂಗ್​ ಬೇಡಿ, ಸುನಿಲ್​​ ಗವಾಸ್ಕರ್​​, ಕಪಿಲ್​ದೇವ್​, ಅನಿಲ್​ ಕುಂಬ್ಳೆ ನಂತರ ರಾಹುಲ್​ ಈ ಗೌರವಕ್ಕೆ ಪಾತ್ರರಾಗಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ದ್ರಾವಿಡ್​ ಭಾರತದ ಪರ 164 ಟೆಸ್ಟ್​ ಹಾಗೂ 344 ಏಕದಿನ ಪಂದ್ಯಗಳಾಡಿದ್ದಾರೆ. ಒಟ್ಟಾರೆ 24,177 ರನ್​ಗಳಿಸಿದ್ದಾರೆ.

ABOUT THE AUTHOR

...view details