ಕರ್ನಾಟಕ

karnataka

ETV Bharat / sports

ವಿಶ್ವಕಪ್​; ಐಸಿಸಿ ನಿರ್ಧಾರಕ್ಕೆ ಕಾಯಲು ಸಾಧ್ಯವಿಲ್ಲ: ಐಪಿಎಲ್​ ಸಿದ್ದತೆ ಮುಂದುವರಿಸುತ್ತೇವೆ - ಬಿಸಿಸಿಐ - ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್​

ಟಿ-20 ವಿಶ್ವಕಪ್ ಕುರಿತ ಐಸಿಸಿ ನಿರ್ಧಾರ ಯಾವಾಗ ಪ್ರಕಟವಾಗಲಿದೆ ಎಂಬುದನ್ನು ಲೆಕ್ಕಿಸದೆಯೇ ಬಿಸಿಸಿಐ ಐಪಿಎಲ್​ ಕುರಿತು ಮುಂದಿವರೆಯುವ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ.

ICC for delaying T20 World Cup decision
ಐಸಿಸಿ -ಐಪಿಎಲ್​

By

Published : Jul 6, 2020, 12:58 PM IST

ಮುಂಬೈ:ಕಳೆದ ಎರಡು ತಿಂಗಳಿಂದ ಟಿ-20 ವಿಶ್ವಕಪ್ ಆಯೋಜನೆ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲು ಐಸಿಸಿ ತಡಮಾಡುತ್ತಿರುವುದಕ್ಕೆ ಬೇಸತ್ತಿರುವ ಬಿಸಿಸಿಐ ಇನ್ನು ಐಸಿಸಿ ನಿರ್ಧಾರಕ್ಕೆ ಕಾಯದೇ ಐಪಿಎಲ್​ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಮುಂದಾಗಿದೆ.

ಟಿ-20 ವಿಶ್ವಕಪ್ ಕುರಿತ ಐಸಿಸಿ ನಿರ್ಧಾರ ಯಾವಾಗ ಪ್ರಕಟವಾಗಲಿದೆ ಎಂಬುದನ್ನು ಲೆಕ್ಕಿಸದೆಯೇ ಬಿಸಿಸಿಐ ಐಪಿಎಲ್​ ಕುರಿತು ಮುಂದುವರೆಯುವ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ.

ಈ ವರ್ಷ ಭಯಾನಾಕವಾಗಿ ಆರಂಭವಾಗಿದೆ. ಇದರಿಂದ ಕಳೆದುಕೊಂಡಿರುವುದಕ್ಕೆ ನಮ್ಮ ಮುಂದೆ ಪರಿಹಾರವಿಲ್ಲ. ಆದರೆ ಸಮಯ ಕಳೆದಂತೆ ನಾವು ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಕೆಲವು ಪ್ರಕಟಣೆಗಳ ವಿಳಂಬದಿಂದಾಗಿ ಇದು ಈಗಾಗಲೇ ಸಾಕಷ್ಟು ಸಮಯವನ್ನು ಬಿಸಿಸಿಐ ಕಳೆದುಕೊಂಡಿದೆ. ಯಾವಾಗ ಮತ್ತು ಏನು ಮಾಡಬೇಕು ಎಂದು ಬೇರೆಯವರು ನಿರ್ಧರಿಸುವವರೆಗೆ ಇನ್ನು ಕಾಯಲು ಸಾಧ್ಯವಿಲ್ಲ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಲ್ ಹೇಳಿಕೆ ನೀಡಿದ್ದಾರೆ.

" ಯುಎಸ್​ನ ಸುರಕ್ಷಿತ ವಲಯದಲ್ಲಿ ಎನ್‌ಬಿಎ ಪ್ರಾರಂಭವಾಗುತ್ತಿದೆ. ಇಂಗ್ಲಿಷ್ ಪ್ರೀಮಿಯರ್ ಲೀಗ್ (ಇಪಿಎಲ್) ನಡೆಯುತ್ತಿದೆ ಮತ್ತು ಎಫ್‌ಎ ಕಪ್ ಪಂದ್ಯಗಳು ಕೂಡ ಆರಂಭವಾಗಿದೆ. ಬಂಡೆಸ್ಲೀಗಾ ಕೂಡ ಮೊದಲ ಪ್ರದರ್ಶನದ ಹಾದಿಯಲ್ಲಿದೆ. ಇನ್ನು ಆಸ್ಟ್ರೇಲಿಯಾದ ದೇಶೀಯ ರಗ್ಬಿ ಲೀಗ್ ಕೂಡ ಪ್ರಾರಂಭವಾಗಲಿದೆ. ಹೀಗಾಗಿ ಸೆಪ್ಟೆಂಬರ್‌ನಿಂದ ಯೋಜನೆಗಳನ್ನು ರೂಪಿಸುವ ಅವಶ್ಯಕತೆ ಬಿಸಿಸಿಐ ಮುಂದಿದೆ" ಎಂದು ಧುಮಾಲ್ ತಿಳಿಸಿದ್ದಾರೆ..

ಟಿ-20 ವಿಶ್ವಕಪ್ ನಿರ್ಧಾರದ ಪ್ರಕಟಣೆಗಳು ಮತ್ತು ಫಲಿತಾಂಶಗಳ ನಮ್ಮ ಕೈಯಲ್ಲಿಲ್ಲ. ಟಿ -20 ವಿಶ್ವಕಪ್​ ಮುಂದೂಡಲಾಗುತ್ತದೆ. ಅದರ ನಿರ್ಧಾರಗಳು ಯಾವಾಗ ಪ್ರಕಟವಾಗುತ್ತದೋ ಪ್ರಕಟವಾಗಲಿ ಎಂದು ಬಿಸಿಸಿಐ ಕಾರ್ಯದರ್ಶಿ ಅರುಣ್ ಧುಮಲ್ ಹೇಳಿದರು.

ABOUT THE AUTHOR

...view details