ಕರ್ನಾಟಕ

karnataka

ETV Bharat / sports

ಐಸಿಸಿ ಚುನಾವಣೆ: ಹಾಲಿ ಅಧ್ಯಕ್ಷರಿಗೆ ಹಿನ್ನೆಡೆ.. ಹಣಕಾಸಿನ ವಿಚಾರದಲ್ಲಿ ಕಾಲಿನ್ ಗ್ರೇವ್ಸ್​ಗೆ ಕ್ಲೀನ್ ಚಿಟ್ - ಐಸಿಸಿ ಚುನಾವಣೆ ಲೇಟೆಸ್ಟ್​ ನ್ಯೂಸ್

ಮುಂಬರುವ ಚುನಾವಣೆಗಳ ಮೇಲೆ ಕಣ್ಣಿಟ್ಟಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮತ್ತು ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯೂಐ) ನಡುವೆ ಹಣಕಾಸಿನ ವಿನಿಮಯವಾಗಿದೆ ಎಂಬ ಐಸಿಸಿ ಅಧ್ಯಕ್ಷ ಆರೋಪವನ್ನು ತಿರಸ್ಕರಿಸಲಾಗಿದೆ.

ICC Elections
ಐಸಿಸಿ ಚುನಾವಣೆ

By

Published : May 25, 2020, 4:19 PM IST

ನವದೆಹಲಿ:ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್​ನಲ್ಲಿ ಚುನಾವಣಾ ಕಾವು ಹೆಚ್ಚಾಗಿದ್ದು, ಕಾಲಿನ್ ಗ್ರೇವ್ಸ್‌ ಐಸಿಸಿ ಮುಖ್ಯಸ್ಥರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮುಂಬರುವ ಚುನಾವಣೆಗಳ ಮೇಲೆ ಕಣ್ಣಿಟ್ಟಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮತ್ತು ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯೂಐ) ನಡುವೆ ಹಣಕಾಸಿನ ವಿನಿಮಯವಾಗಿದೆ ಎಂಬ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಅವರ ಆರೋಪವನ್ನು ನೈತಿಕ ಅಧಿಕಾರಿ ವಜಾಗೊಳಿಸಿದ್ದಾರೆ.

ಐಸಿಸಿ ಅಧ್ಯಕ್ಷರ ಪರವಾಗಿ ಐಸಿಸಿ ಜನರಲ್ ಕೌನ್ಸಿಲ್ ಮತ್ತು ಕಾರ್ಯದರ್ಶಿ ಕಚೇರಿ ಏಪ್ರಿಲ್ 30 ರಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ, ಕ್ರಿಕೆಟ್ ವೆಸ್ಟ್ ಇಂಡೀಸ್​ಗೆ ನೀಡಿದ ಸಾಲಕ್ಕೆ ಸಂಬಂಧಿಸಿದ ವಿಷಯವನ್ನು ಎಥಿಕ್ಸ್ ಆಫೀಸರ್‌ ಗಮನಕ್ಕೆ ತಂದಿತು.

ಎಥಿಕ್ಸ್ ಆಫೀಸರ್ ಐಸಿಸಿ ಅಧ್ಯಕ್ಷರ ಆತಂಕವನ್ನು ತಳ್ಳಿಹಾಕಿದ್ದು, ಇದಕ್ಕೂ ಮುಂಬರುವ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. ಇದು ಹಾಲಿ ಅಧ್ಯಕ್ಷರಿಗೆ ಹಿನ್ನಡೆ ಉಂಟುಮಾಡಿದೆ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details