ನವದೆಹಲಿ: ಇತ್ತೀಚೆಗೆ ಭಾರತದ ಶಶಾಂಕ್ ಮನೋಹರ್ ಅವರಿಂದ ತೆರವಾಗಿರುವ ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ನವರನ್ನು ಆಯ್ಕೆ ಮಾಡಬಾರದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಎಹ್ಸಾನ್ ಮಣಿ ಅಭಿಪ್ರಾಯಪಟ್ಟಿದ್ದಾರೆ.
ಜುಲೈನಲ್ಲಿ ಶಶಾಂಕ್ ಮನೋಹರ್ ಅವರ ಅಧಿಕಾರವಧಿ ಮುಗಿದಿದೆ. ಮತ್ತೊಂದು ಅವಧಿಗೆ ಐಸಿಸಿ ಹುದ್ದೆಯಲ್ಲಿ ಮುಂದುವರಿಯಲು ಇಷ್ಟಪಡದ ರಾಜಿನಾಮಿ ನೀಡಿದ್ದಾರೆ. ಪ್ರಸ್ತುತ ಹಾಂಕಾಂಗ್ ಕ್ರಿಕೆಟ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ರಾಗಿದ್ದ ಇಮ್ರಾನ್ ಖವಾಜ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಖಾಯಂ ಹುದ್ದೆಗಾಗಿ ಇಂಗ್ಲೆಂಡ್ನ ಕಾಲಿನ್ ಗ್ರೇವ್ಸ್, ವೆಸ್ಟ್ ಇಂಡೀಸ್ನ ಡೇವ್ ಕ್ಯಾಮರೂನ್ ಹಾಗೂ ಭಾರತದ ಸೌರವ್ ಗಂಗೂಲಿ ಹೆಸರು ಕೇಳಿಬರುತ್ತಿದೆ.
ಆದರೆ ತಾವೂ ಐಸಿಸಿ ಮುಖ್ಯಸ್ಥ ಸ್ಥಾನದ ಆಕಾಂಕ್ಷಿಯಲ್ಲ ಎಂದಿರುವ ಎಹ್ಸಾನ್ ಮಣಿ, ಜೊತೆಗೆ ಬಿಗ್ ತ್ರೀ ರಾಷ್ಟ್ರಗಳಾದ ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ನವರು ಐಸಿಸಿ ಚುಕ್ಕಾಣಿ ಹಿಡಿಯಬಾರದರು ಎಂದಿದ್ದಾರೆ. ಈ ದೇಶದವರು ಒಂದು ರೀತಿಯ ರಾಜಕೀಯವನ್ನು ಪರಿಚಯಿಸಿವೆ ಎಂದಿದ್ದಾರೆ.
ಅವಧಿ ಮುಗಿದಿದ್ದರೂ ಹೊಸ ಮುಖ್ಯಸ್ಥನನ್ನು ಆಯ್ಕೆ ಮಾಡದಿರುವುದಕ್ಕೆ ಕಾರಣ ಆಯ್ಕೆ ಪ್ರಕ್ರಿಯೆ. ಮೂರನೇ ಎರಡರಷ್ಟು ಬಹುಮತ ಪಡೆದವರನ್ನ ಅಥವಾ ಸರಳ ಬಹುಮತ ಪಡೆದವರನ್ನ ಐಸಿಸಿ ಮುಖ್ಯಸ್ಥನನ್ನಾಗಿ ಆಯ್ಕೆ ಮಾಡಬೇಕೆ ಎಂಬುದು ಇನ್ನು ಬಗೆಹರಿದಿಲ್ಲ. ಈ ಹಿಂದೆ ಇದಕ್ಕಾಗಿ ನಡೆದ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಮೂಡದ ಕಾರಣ ಆಯ್ಕೆ ಪ್ರಕ್ರಿಯೆ ಮಂದೂಡಲಾಗಿದೆ.
ತಮ್ಮ ಹುದ್ದೆಗಳನ್ನು ರಕ್ಷಿಸಿಕೊಳ್ಳಲು ಈ ಮೂರು ರಾಷ್ಟ್ರಗಳು 2014ರಲ್ಲಿ ಹೊಸ ರಾಯಕೀಯವನ್ನು ಪರಿಚಯಿಸಿದ್ದಾರೆ. ಈಗ ಅದನ್ನು ತೆಗೆದು ಹಾಕಲು ಪ್ರಯತ್ನಿಸುತ್ತಿದ್ದಾರೆ. ಏಕೆಂದರೆ ಆ ರಾಜಕೀಯ ಈಗ ಅವರಿಗೆ ಸರಿಬರುತ್ತಿಲ್ಲ. ನನ್ನ ಪ್ರಕಾರ ಈ ಮೂರು ರಾಷ್ಟ್ರಗಳನ್ನು ಬಿಟ್ಟು ಬೇರೆ ಯಾವ ರಾಷ್ಟ್ರದವರಾದೂ ಮುಖ್ಯಸ್ಥರಾದರೆ ಒಳ್ಳೆಯದು ಎನ್ಶಾನ್ ಮಣಿ ತಿಳಿಸಿದ್ದಾರೆ.