ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನು ಸಾಹ್ನಿ ಅವರನ್ನು "ರಜೆ" ಮೇಲೆ ಕಳುಹಿಸಲಾಗಿದ್ದು, ಕೆಲವು ದೊಡ್ಡ ಕ್ರಿಕೆಟ್ ಬೋರ್ಡ್ಗಳ ಅಸಮಾಧಾನಕ್ಕೆ ಕಾರಣರಾಗಿರುವ ಅವರು ಅವಧಿ ಮುಗಿಯುವ ಮೊದಲು ರಾಜೀನಾಮೆ ನೀಡಬಹುದು ಎಂಬ ಸುದ್ದಿ ಕೇಳಿಬರುತ್ತಿದೆ
ಆಡಿಟ್ ಸಂಸ್ಥೆ 'ಪ್ರೈಸ್‌ವಾಟರ್‌ಹೌಸ್ ಕೂಪರ್ಸ್'ನ ಆಂತರಿಕ ತನಿಖೆಯ ಸಂದರ್ಭದಲ್ಲಿ ಅವರ ನಡವಳಿಕೆ ಪರಿಶೀಲನೆಗೆ ಒಳಪಟ್ಟ ನಂತರ ಈ ಮಾತು ಕೇಳಿಬರುತ್ತಿದೆ.
ಸಾಹ್ನಿ, 2019ರ ಐಸಿಸಿ ಏಕದಿನ ವಿಶ್ವಕಪ್ ನಂತರ 2022ರ ಅವಧಿಯವರೆಗೆ ಡೇವ್ ರಿಚರ್ಡ್ಸನ್ ನಂತರ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಆದರೆ ವಿವಿಧ ನೀತಿ, ನಿರ್ಧಾರಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಭಾವಶಾಲಿ ಕ್ರಿಕೆಟ್ ಮಂಡಳಿಗಳೊಂದಿಗೆ ಸಾಹ್ನಿ ಉತ್ತಮ ಸಂಬಂಧ ಹೊಂದುವಲ್ಲಿ ವಿಫಲರಾಗಿದ್ದರು.