ಕರ್ನಾಟಕ

karnataka

ETV Bharat / sports

ಟಿ10 ಲೀಗ್​ ಭ್ರಷ್ಟಾಚಾರ: ಭಾರತ ಮೂಲದ ಫ್ರಾಂಚೈಸಿ ಮಾಲೀಕನಿಗೆ 2 ವರ್ಷ ನಿಷೇಧ - ICC bans Indian Deepak Agarwal

ಯುಎಇನಲ್ಲಿ ನಡೆದಿದ್ದ ಈ ಟೂರ್ನಿಯಲ್ಲಿ ದೀಪಕ್ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಐಸಿಸಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯನ್ನು ಉಲ್ಲಂಘಿಸಿದ ಆರೋಪವನ್ನು ಅಗರ್​ವಾಲ್​ ಒಪ್ಪಿಕೊಂಡ ನಂತರ 2 ವರ್ಷ ನಿಷೇಧದ ಶಿಕ್ಷೆಗೆ ಗುರಿಪಡಿಸಲಾಗಿದೆ.

ದೀಪಕ್​ ಅಗರ್​ವಾಲ್​ಗೆ 2 ವರ್ಷ ನಿಷೇದ ಶಿಕ್ಷೆ
ದೀಪಕ್​ ಅಗರ್​ವಾಲ್​ಗೆ 2 ವರ್ಷ ನಿಷೇದ ಶಿಕ್ಷೆ

By

Published : Apr 30, 2020, 7:59 AM IST

ನವದೆಹಲಿ: ಅಬುದಾಬಿ ಟಿ10 ಲೀಗ್ ಕ್ರಿಕೆಟ್‌ ಟೂರ್ನಿಯ ಸಿಂಧ್ ಪ್ರಾಂಚೈಸಿಯ ಮಾಲೀಕರಾಗಿದ್ದ ಭಾರತೀಯ ಮೂಲದ ದೀಪಕ್ ಅಗರವಾಲ್ ಅವರಿಗೆ ಐಸಿಸಿ 2 ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ.

ಯುಎಇನಲ್ಲಿ ನಡೆದಿದ್ದ ಈ ಟೂರ್ನಿಯಲ್ಲಿ ದೀಪಕ್ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಐಸಿಸಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯನ್ನು ಉಲ್ಲಂಘಿಸಿದ ಆರೋಪವನ್ನು ಅಗರ್​ವಾಲ್​ ಒಪ್ಪಿಕೊಂಡ ನಂತರ 2 ವರ್ಷಗಳ ನಿಷೇಧ ಹೇರಲಾಗಿದೆ. ಈಗಾಗಲೇ ಅವರು 6 ತಿಂಗಳು ಶಿಕ್ಷೆ ಪೂರೈಸಿದ್ದು ಇನ್ನೂ ಒಂದೂವರೆ ವರ್ಷಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿಯಬೇಕಿದೆ.

ಅಗರ್​ವಾಲ್ 2018ರ ​ ಟಿ10 ಲೀಗ್​ನಲ್ಲಿ ಭ್ರಷ್ಟಾಚಾರ ಮಾಡಿದ ಆರೋಪ ವಿದ್ದಾಗ ತನಿಖೆಗೆ ವಿಳಂಬ ಮಾಡಿದ್ದರು. ಜೊತೆಗೆ ಸಾಕ್ಷ್ಯ ನಾಶ ಪಡಿಸಿ ತನಿಖೆ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದರು. ಅವರು ಐಸಿಸಿ ನೀತಿ ಸಂಹಿತೆ​ 2.4.7 ಉಲ್ಲಂಘನೆ ಮಾಡಿದ ಆರೋಪದ ಮೇಲೆ 2 ವರ್ಷ ಐಸಿಸಿಯ ಯಾವುದೇ ಮಾದರಿಯ ಕ್ರಿಕೆಟ್ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ನಿಷೇಧಕ್ಕೆ ಒಳಗಾಗಿದ್ದಾರೆ.

ABOUT THE AUTHOR

...view details