ದುಬೈ: ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಸ್ಟೀವ್ ಸ್ಮಿತ್ 'ಐಸಿಸಿ ಟೆಸ್ಟ್ ಕ್ರಿಕೆಟಿಗ' ಪ್ರಶಸ್ತಿಗೆ ಭಾಜನರಾಗಿದ್ದಾರೆ. 31 ವರ್ಷದ ಆಸೀಸ್ ಸ್ಟಾರ್ ಬ್ಯಾಟ್ಸ್ಮನ್, ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಆಲಿಸ್ಟರ್ ಕುಕ್ ಅವರಂತಹ ಸ್ಟಾರ್ ಆಟಗಾರರನ್ನು ಹಿಂದಿಕ್ಕಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಆದರೆ ಸ್ಮಿತ್ ಈ ಪ್ರಶಸ್ತಿಗೆ ಭಾಜನರಾಗಿರುವುದು ಯಾವುದೇ ಅಚ್ಚರಿಯಲ್ಲ. ಏಕೆಂದರೆ ಅವರು ಈ ಅವದಿಯಲ್ಲಿ 65.79ರ ಸರಾಸರಿಯಲ್ಲಿ 7040 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದ ಲೆಜೆಂಡ್ ಬ್ರಾಡ್ಮನ್(99.9) ಅವರನ್ನು ಹೊರತುಪಡಿಸಿದರೆ ಸ್ಮಿತ್ ಮಾತ್ರ ಸರಸರಿಯಲ್ಲಿ 60 ದಾಟಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಅವರು ಒಂದು ವರ್ಷ ನಿಷೇಧಕ್ಕೊಳಗಾದರೂ ಈ ಪ್ರಶಸ್ತಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.