ಕರ್ನಾಟಕ

karnataka

ETV Bharat / sports

ನಾಲ್ಕು ದಿನಗಳ ಟೆಸ್ಟ್​ ಕ್ರಿಕೆಟ್​ ಯೋಜನೆ ವಿರೋಧಿಸುತ್ತೇನೆ: ಗ್ಲೆನ್​ ಮೆಕ್​ಗ್ರಾತ್​ ಖಡಕ್​ ಮಾತು - 4 ದಿನಗಳ ಟೆಸ್ಟ್​ಗೆ ವಿರೋಧ

2023ರಿಂದ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ 5 ದಿನಗಳ ಬದಲಾಗಿ ನಾಲ್ಕು ದಿನಗಳ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸಲು ಐಸಿಸಿ ಇತ್ತೀಚೆಗೆ ತಿಳಿಸಿತ್ತು. ಇದಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​ ಐಸಿಸಿಗೆ ಬೆಂಬಲ ನೀಡಿತ್ತು. ಆದರೆ ಮೆಕ್‌ಗ್ರಾತ್‌ ಐಸಿಸಿಯ ನಿರ್ಧಾರವನ್ನು ಸ್ಪಷ್ಟವಾಗಿ ವಿರೋಧಿಸಿದ್ದಾರೆ.

Glenn McGrath
Glenn McGrath

By

Published : Jan 2, 2020, 7:08 PM IST

ಸಿಡ್ನಿ: ಆಸ್ಟ್ರೇಲಿಯಾದ ಸ್ಪಿನ್ನರ್​ ನಥನ್​ ಲಿಯಾನ್​ ಐಸಿಸಿಯ ನಾಲ್ಕು ದಿನಗಳ ಟೆಸ್ಟ್​ ಯೋಜನೆಯನ್ನು ಧಿಕ್ಕರಿಸಿದ ಬೆನ್ನಲ್ಲೇ ಆಸೀಸ್​ ಮಾಜಿ ವೇಗಿ ಗ್ಲೆನ್​ ಮೆಕ್​ಗ್ರಾಕ್​ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.

2023ರಿಂದ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ 5 ದಿನಗಳ ಬದಲಾಗಿ ನಾಲ್ಕು ದಿನಗಳ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸಲು ಐಸಿಸಿ ಇತ್ತೀಚೆಗೆ ತಿಳಿಸಿತ್ತು. ಇದಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​ ಐಸಿಸಿಗೆ ಬೆಂಬಲ ನೀಡಿತ್ತು. ಆದರೆ ಮೆಕ್‌ಗ್ರಾತ್‌ ಐಸಿಸಿಯ ನಿರ್ಧಾರವನ್ನು ಸ್ಪಷ್ಟವಾಗಿ ವಿರೋಧಿಸಿದ್ದಾರೆ.

ಗ್ಲೆನ್​ ಮೆಕ್​ಗ್ರಾತ್​

ನ್ಯೂಜಿಲ್ಯಾಂಡ್​ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್​ ಪಂದ್ಯಕ್ಕೂ ಮುನ್ನ ಸಿಡ್ನಿಯಲ್ಲಿ ಮಾತನಾಡಿದ ಆಸ್ಟ್ರೇಲಿಯ ಪರ 124 ಟೆಸ್ಟ್​ ಪಂದ್ಯಗಳನ್ನಾಡಿರುವ ಮೆಕ್​ಗ್ರಾತ್,​ 'ನಾನು ತುಂಬಾ ಸಂಪ್ರದಾಯವಾದಿ. ಆ ಆಟ ಈಗ ಹೇಗಿದೆಯೋ ಆಗೆಯೇ ಇರಬೇಕೆಂದು ಬಯಸುತ್ತೇನೆ' ಎಂದು ಟೆಸ್ಟ್​ ಕ್ರಿಕೆಟ್​ನ ಬದಲಾವಣೆಯನ್ನು ವಿರೋಧಿಸಿದ್ದಾರೆ.

'ನನ್ನ ಪ್ರಕಾರ ಐದು ದಿನಗಳ ಆಟ ವಿಶೇಷವಾದುದು. ಅದನ್ನು ಕಡಿತಗೊಳಿಸುವುದನ್ನು ನಾನು ವಿರೋಧಿಸುತ್ತೇನೆ. ಅದೇ ರೀತಿ ಪಿಂಕ್‌ ಟೆಸ್ಟ್‌, ಹಗಲು-ರಾತ್ರಿ ಪಂದ್ಯಗಳನ್ನು ಪರಿಚಯಿಸಿರುವುದು ಟೆಸ್ಟ್​ ಕ್ರಿಕೆಟ್​ನ ತಾಜಾತನವನ್ನು ಕಾಪಾಡಿಕೊಳ್ಳವುದಕ್ಕೆ ಉತ್ತಮ ಮಾರ್ಗ. ಆದರೆ, ಟೆಸ್ಟ್​ನಲ್ಲಿ ದಿನಗಳನ್ನು ಕಡಿತ ಮಾಡುವುದನ್ನು ನಾನು ಖಂಡಿತಾ ವಿರೋಧಿಸುತ್ತೇನೆ ಎಂದಿದ್ದಾರೆ.

ಗ್ಲೆನ್​ ಮೆಕ್​ಗ್ರಾತ್​

ABOUT THE AUTHOR

...view details