ಲಾಹೋರ್:ಪಾಕಿಸ್ತಾನ ತವರಿನಲ್ಲಿ ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಕ್ಲೀನ್ಸ್ವೀಪ್ಗೆ ಗುರಿಯಾಗಿದ್ದರಿಂದ ಪಿಸಿಬಿ ಸರ್ಫರಾಜ್ ಅಹಮ್ಮದ್ರನ್ನು ನಾಯಕತ್ವದಿಂದ ಕಿತ್ತೆಸೆದು ಯುವ ಬ್ಯಾಟ್ಸ್ಮನ್ ಬಾಬರ್ ಅಜಮ್ಗೆ ಟಿ20 ನಾಯಕತ್ವ ನೀಡಿದೆ.
ಮೂರು ಮಾದರಿಯ ಕ್ರಿಕೆಟ್ನಲ್ಲಿ ಪಾಕಿಸ್ತಾನದ ನಂಬರ್ ಒನ್ ಬ್ಯಾಟ್ಸ್ಮನ್ ಆಗಿರುವ ಬಾಬರ್ ಅಜಮ್ ಪ್ರಥಮ ಬಾರಿಗೆ ನಾಯಕನಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ವೇಳೆ ತಮ್ಮ ವೈಫಲ್ಯತೆಗಳನ್ನು ಸರಿಪಡಿಸಿಕೊಂಡು ತಂಡವನ್ನು ಮುನ್ನಡೆಸುವ ಜೊತೆಗೆ ಉತ್ತಮ ಬ್ಯಾಟಿಂಗ್ ಲಯವನ್ನು ಉಳಿಸಿಕೊಳ್ಳಲು ಬಯಸಿದ್ದೇನೆ ಎಂದಿದ್ದಾರೆ.
ಜನರು ಕೇವಲ 3 ಪಂದ್ಯಗಳಲ್ಲಿ ವಿಫಲನಾಗಿದ್ದಕ್ಕೆ ಟೀಕಿಸುತ್ತಿದ್ದಾರೆ. ಆದರೆ, ಆಟದಲ್ಲಿ ಯಾವಾಗಲೂ ಒಂದೇ ಸಮವಿರುವುದಿಲ್ಲ. ಅಪ್ ಅಂಡ್ ಡೌನ್ ಆಗಲೇಬೇಕು. ಅದು ಶ್ರೀಲಂಕಾ ಸರಣಿಯಲ್ಲಿ ನಮ್ಮ ಪ್ರದರ್ಶನ ತುಂಬಾ ಕಳೆಪೆಯಾಗಿತ್ತು ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ನಾಯಕನಾದರೆ ನಾನು ಒತ್ತಡಕ್ಕೊಳಗಾಗುತ್ತೇನೆ ಎಂದು ನನಗನ್ನಿಸುತ್ತಿಲ್ಲ. ನಾನು ನನ್ನ ನೈಜ ಆಟವನ್ನು ಮುಂದುವರಿಸುತ್ತೇನೆ, ಇದರಲ್ಲಿ ನನಗೆ ನಂಬಿಕೆ ಇದೆ ಎಂದಿದ್ದಾರೆ.
ಇನ್ನು, ಬ್ಯಾಟ್ಸ್ಮನ್ ಹಾಗೂ ನಾಯಕನಾಗಿ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ತಮ್ಮ ತಂಡವನ್ನು ಉತ್ತಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ನಾನು ಕೂಡ ಅವರನ್ನು ಹಿಂಬಾಲಿಸಲು ಪ್ರಯತ್ನಿಸುತ್ತೇನೆ ಎಂದು ಕ್ರಿಕ್ಬಜ್ಗೆ ನೀಡಿದ ಸಂದರ್ಶನದಲ್ಲಿ ಬಾಬರ್ ಹೇಳಿಕೊಂಡಿದ್ದಾರೆ.