ಕರ್ನಾಟಕ

karnataka

ETV Bharat / sports

ಖಂಡಿತವಾಗಿಯೂ ಐಪಿಎಲ್​ನಲ್ಲಿ ರೈನಾರನ್ನು ಮಿಸ್​ ಮಾಡಿಕೊಳ್ಳುತ್ತೇನೆ : ಜಾಂಟಿ ರೋಡ್ಸ್​ - ಚೆನ್ನೈ ಸೂಪರ್​ ಕಿಂಗ್ಸ್​

ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ಫೀಲ್ಡಿಂಗ್ ಆಗಿರುವ ರೋಡ್ಸ್​ ಟ್ವಿಟರ್​ನಲ್ಲಿ ಅಭಿಮಾನಿಗಳೊಂದಿಗೆ ನಡೆಸಿದ ಟ್ವಿಟರ್​ ಸಂವಾದದಲ್ಲಿ ರೈನಾರ ಅನುಪಸ್ಥಿತಿ ನನಗಷ್ಟೇ ಅಲ್ಲ ಐಪಿಎಲ್​ಗೂ ಕಾಡುತ್ತಿದೆ ಎಂದಿದ್ದಾರೆ..

ಸುರೇಶ್​ ರೈನಾ
ಸುರೇಶ್​ ರೈನಾ

By

Published : Sep 28, 2020, 11:00 PM IST

ದುಬೈ:ಇಂಡಿಯನ್​ ಪ್ರೀಮಿಯರ್​ ಲೀಗ್​ನ 13ನೇ ಆವೃತ್ತಿಯಿಂದ ವೈಯಕ್ತಿಕ ಕಾರಣಗಳಿಂದ ಹೊರಗುಳಿದಿರುವ ಸುರೇಶ್ ರೈನಾ ಅವರು ಚೆನ್ನೈ ಸೂಪರ್​ ಕಿಂಗ್ಸ್​ನಲ್ಲಿ ಆಡದಿರುವುದನ್ನು ಮಿಸ್​ ಮಾಡಿಕೊಳ್ಳುವುದಾಗಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್​ ಅಭಿಪ್ರಾಯಪಟ್ಟಿದ್ದಾರೆ.

ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ಫೀಲ್ಡಿಂಗ್ ಆಗಿರುವ ರೋಡ್ಸ್​ ಟ್ವಿಟರ್​ನಲ್ಲಿ ಅಭಿಮಾನಿಗಳೊಂದಿಗೆ ನಡೆಸಿದ ಟ್ವಿಟರ್​ ಸಂವಾದದಲ್ಲಿ ರೈನಾರ ಅನುಪಸ್ಥಿತಿ ನನಗಷ್ಟೇ ಅಲ್ಲ ಐಪಿಎಲ್​ಗೂ ಕಾಡುತ್ತಿದೆ ಎಂದಿದ್ದಾರೆ.

ಅಭಿಮಾನಿಯೊಬ್ಬ ನೀವು ಸುರೇಶ್ ರೈನಾರನ್ನು ಮಿಸ್​ ಮಾಡಿಕೊಳ್ಳಲಿದ್ದೀರಾ? ಎಂದು ಕೇಳಿದ್ದಕ್ಕೆ ಉ್ತತರಿಸಿರುವ ರೋಡ್ಸ್​, " ಖಂಡಿತವಾಗಿಯೂ ನಾನು ಚೆನ್ನೈ ಸೂಪರ್ ಕಿಂಗ್ಸ್​ನಲ್ಲಿ ರೈನಾ ಇಲ್ಲದಿರುವುದನ್ನು ಮಿಸ್​ ಮಾಡಿಕೊಳ್ಳುತ್ತೇನೆ. ಮಿಸ್ಟರ್​ಐಪಿಎಲ್​ ಇಲ್ಲದೆ ಲೀಗ್​ ಹಿಂದಿನ ಆವೃತ್ತಿಗಳಂತಿರುವುದಿಲ್ಲ. ಆದರೆ, ನನ್ನನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ, ಯಾವುದೇ ಆಟಗಾರ ಆಟಕ್ಕಿಂತ ದೊಡ್ಡವನಲ್ಲ ಮತ್ತು ಐಪಿಎಲ್​ ಯುವ ಭಾರತೀಯ ತಾರೆಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸುವ ಅವಕಾಶವನ್ನು ನೀಡುತ್ತಲೇ ಇದೆ. ಆದರೆ, ಖಂಡಿತ ರೈನಾರ ಆಟವನ್ನು ನಾನು ತಪ್ಪಿಸಿಕೊಳ್ಳುತ್ತೇನೆ" ಎಂದು ತಿಳಿಸಿದ್ದಾರೆ.

ಕಳೆದ 12 ವರ್ಷಗಳಲ್ಲಿ ಸಿಎಸ್​ಕೆ ನಿಷೇಧಗೊಂಡಿದ್ದ 2 ವರ್ಷಗಳನ್ನು ಬಿಟ್ಟು ರೈನಾ ಸಿಎಸ್​ಕೆ ತಂಡದ ಪ್ರಮುಖ ಭಾಗವಾಗಿದ್ದರು. ಅವರು ಸಿಎಸ್​ಕೆ ಎಲ್ಲಾ 10 ಆವೃತ್ತಿಗಳಲ್ಲೂ ಯಶಸ್ವಿಯಾಗಿ ಪ್ಲೇಆಫ್​ ತಲುಪಲು ನೆರವಾಗಿದ್ದರು. ಈಗಾಗಲೆ ಕಳೆದ ಎರಡು ಪಂದ್ಯಗಳಿಂದ ಚೆನ್ನೈ ಸೂಪರ್​ ಕಿಂಗ್ಸ್​ ಬ್ಯಾಟಿಂಗ್ ವೈಫಲ್ಯವನ್ನು ನೋಡಿದ ಅಭಿಮಾನಿಗಳು ಕೂಡ ರೈನಾರನ್ನು ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಸಾಮಾಜಿಕ ಜಾಲಾತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ABOUT THE AUTHOR

...view details