ಕರ್ನಾಟಕ

karnataka

ETV Bharat / sports

ಕ್ರಿಕೆಟ್​ಗಿಂತ ಮೊದಲು ಶಾಲಾ - ಕಾಲೇಜುಗಳ ಪುನಾರಂಭಕ್ಕೆ ಮೊದಲ ಆದ್ಯತೆ ಕೊಡಬೇಕಿದೆ: ಕಪಿಲ್​ ದೇವ್​ - corona lock down

ದೇಶವೇ ಲಾಕ್​ಡೌನ್​ಗೆ ಸಿಲುಕಿದೆ. ಆದರೆ ನಾವು ಈ ಸಂದರ್ಭದಲ್ಲಿ ಕ್ರಿಕೆಟ್​ ಬಗ್ಗೆ ಆಲೋಚನೆ ಮಾಡುವುದನ್ನು ಬಿಟ್ಟು, ಶಾಲಾ ಕಾಲೇಜು ಬಿಟ್ಟು ತಿಂಗಳುಗಟ್ಟಲೇ ಮನೆಯಲ್ಲಿರುವ ಮಕ್ಕಳ ಭವಿಷ್ಯದ ಬಗ್ಗೆಯೂ ಆಲೋಚನೆ ಮಾಡಬೇಕಿದೆ. ಏಕೆಂದರೆ ಅವರು ನಮ್ಮ ಯುವ ಪೀಳಿಗೆ. ನನ್ನ ಪ್ರಕಾರ ಶಾಲೆಗಳು ಮೊದಲು ತೆರೆಯಬೇಕು. ಕ್ರಿಕೆಟ್​, ಫುಟ್ಬಾಲ್​​​​ ಯಥಾವತ್ತಾಗಿ ಆರಂಭವಾಗುತ್ತವೆ ಎಂದು ಕಪಿಲ್ ದೇವ್​ ತಿಳಿಸಿದ್ದಾರೆ.

ಕಪಿಲ್​ ದೇವ್​
ಕಪಿಲ್​ ದೇವ್​

By

Published : Apr 25, 2020, 3:15 PM IST

ನವದೆಹಲಿ:ಕೊರೊನಾ ಲಾಕ್​ಡೌನ್​ ವೇಳೆ ಕ್ರಿಕೆಟ್​ ಬಗ್ಗೆ ಆಲೋಚನೆ ಮಾಡುವುದಕ್ಕಿಂತ ಶಾಲಾ-ಕಾಲೇಜುಗಳನ್ನು ಆರಂಭಿಸುವುದಕ್ಕೆ ಹೆಚ್ಚಿನ ಗಮನ ನೀಡಬೇಕೆಂದು ಕಪಿಲ್​ ದೇವ್​ ಹೇಳಿದ್ದಾರೆ.

ದೇಶವೇ ಲಾಕ್​ಡೌನ್​ಗೆ ಸಿಲುಕಿದೆ. ಆದರೆ, ನಾವು ಈ ಸಂದರ್ಭದಲ್ಲಿ ಕ್ರಿಕೆಟ್​ ಬಗ್ಗೆ ಆಲೋಚನೆ ಮಾಡುವುದನ್ನು ಬಿಟ್ಟು, ಶಾಲಾ ಕಾಲೇಜು ಬಿಟ್ಟು ತಿಂಗಳುಗಟ್ಟಲೇ ಮನೆಯಲ್ಲಿರುವ ಮಕ್ಕಳ ಭವಿಷ್ಯದ ಬಗ್ಗೆಯೂ ಆಲೋಚನೆ ಮಾಡಬೇಕಿದೆ. ಏಕೆಂದರೆ ಅವರು ನಮ್ಮ ಯುವ ಪೀಳಿಗೆ. ನನ್ನ ಪ್ರಕಾರ ಶಾಲೆಗಳು ಮೊದಲು ತೆಗೆಯಬೇಕು. ಕ್ರಿಕೆಟ್​, ಫುಟ್​ಬಾಲ್​ ಯಥಾವತ್ತಾಗಿ ಆರಂಭವಾಗುತ್ತವೆ ಎಂದು ಕಪಿಲ್ ದೇವ್​ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್​ ಅಖ್ತರ್​ ಭಾರತ - ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆ ಮಾಡಬೇಕು. ಅದರಿಂದ ಬರುವ ಆದಾಯವನ್ನು ಎರಡು ರಾಷ್ಟ್ರಗಳು ಹಂಚಿಕೊಳ್ಳಬಹುದು ಎಂದು ಎಂದಿದ್ದರು. ಇದಕ್ಕೆ ಕಪಿಲ್​ ದೇವ್​ ಹಣವನ್ನು ಸಂಗ್ರಹಿಸಲು ನಮಗೆ ಹಲವಾರು ಮಾರ್ಗಗಳಿವೆ. ನಮಗೆ ಕ್ರಿಕೆಟ್​ ಆಡುವ ಅವಶ್ಯಕತೆಯಿಲ್ಲ ಎಂದಿದ್ದರು.

ಇಂದು ಅದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ದೇವ್​, "ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಗಳು ನಡೆಯಲಿ ಎಂದು ಭಾವನಾತ್ಮಕವಾಗಿ ಹೇಳಬಹುದು. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಕ್ರಿಕೆಟ್ ಆಡುವುದು ಪ್ರಮುಖ ಆದ್ಯತೆಯಲ್ಲ. ನಿಮಗೂ ಹಣ ಬೇಕಿದ್ದರೆ ಗಡಿಯಲ್ಲಿ ನಡೆಸುತ್ತಿರುವ ಚಟುವಟಿಕೆಗಳನ್ನು ನಿಲ್ಲಿಸಿ" ಎಂದು ಅಖ್ತರ್​ ನೀಡಿದ್ದ ಸಲಹೆಯನ್ನು ತಿರಸ್ಕರಿಸಿದ್ದಾರೆ.

"ದೇಶವೇ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಕ್ರಿಕೆಟ್​ ಪಂದ್ಯಕ್ಕೆ ಖರ್ಚು ಮಾಡುವ ಹಣವನ್ನು ಆಸ್ಪತ್ರೆಗಳು ಮತ್ತು ಶಾಲೆಗಳನ್ನು ನಿರ್ಮಿಸಲು ಬಳಸಬಹುದು. ನಮ್ಮಲ್ಲಿ ಹಲವಾರು ಧಾರ್ಮಿಕ ಸಂಘಟನೆಗಳಿವೆ. ನಮಗೆ ನಿಜವಾಗಿಯೂ ಹಣದ ಅಗತ್ಯವಿದ್ದರೆ ಅವರು ನೀಡಲು ಮುಂದೆ ಬರಬೇಕು, ಅದು ಅವರ ಕರ್ತವ್ಯ. ಏಕೆಂದರೆ ನಾವು ಹಲವಾರು ಬಾರಿ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ, ತುಂಬಾ ದೇಣಿಗೆ ನೀಡಿದ್ದೇವೆ. ಹೀಗಾಗಿ ಅವರು ಸರ್ಕಾರಕ್ಕೆ ಸಹಾಯ ಮಾಡಬೇಕು "ಎಂದಿದ್ದಾರೆ.

ಕಪಿಲ್​ ದೇವ್​ ಉತ್ತರದಿಂದ ಆಶ್ಚರ್ಯಕ್ಕೊಳಗಾಗಿದ್ದ ಅಖ್ತರ್​, "ನಾನು ಹೇಳಿದ್ದು, ಕಪಿಲ್​ ಬಾಯ್​ಗೆ ಅರ್ಥವಾಗಿಲ್ಲ. ಎಲ್ಲರೂ ಆರ್ಥಿಕವಾಗಿ ಸಂಕಷ್ಟ ದಲ್ಲಿದ್ದಾರೆ. ಇಂತಹ ಕಠಿಣ ಸಂದರ್ಭದಲ್ಲಿ ಎರಡು ದೇಶಗಳು ಕ್ರಿಕೆಟ್​ ಆಡಿದರೆ ಉತ್ತಮ ಆದಾಯ ಬರಲಿದೆ. ಆದರೆ ಕಪಿಲ್​ ದೇವ್​ ನಮಗೆ ಹಣದ ಅಗತ್ಯವಿಲ್ಲ ಎಂದು ಹೇಳಿರುವುದು ನನಗೆ ನಿಜಕ್ಕು ಆಶ್ಚರ್ಯ ತಂದಿದೆ. ಆದರೆ ನನ್ನ ಈ ಆಲೋಚನೆ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಭಾವಿಸುತ್ತೇನೆ" ಎಂದು ಅಖ್ತರ್​ ಅಜ್​ ತಕ್​ಗೆ ಹೇಳಿಕೆ ನೀಡಿದ್ದಾರೆ.

ABOUT THE AUTHOR

...view details