ನಾರ್ಥ್ಸೌಂಡ್: ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಕಳೆದ ಎರಡು ವರ್ಷಗಳಿಂದ ಮೂರಂಕಿ ದಾಟದೇ ಹಲವು ಟೀಕೆಗೆ ಒಳಗಾಗಿದ್ದರು. ಆದರೆ, ಈ ಟೀಕೆಗಳು ನನ್ನ ಮೇಲೆ ಪ್ರಭಾವ ಬೀರದಂತಿರಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
ಅನಗತ್ಯ ಟೀಕೆಗಳು ನನ್ನ ಮೇಲೆ ಪ್ರಭಾವ ಬೀರುವುದಿಲ್ಲ: ಅಜಿಂಕ್ಯಾ ರಹಾನೆ - rohith sharma
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ರಹಾನೆ ಮೊದಲ ಇನ್ನಿಂಗ್ಸ್ನಲ್ಲಿ 81 ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 102 ರನ್ಗಳಿಸಿ ಗೆಲುವಿನ ರೂವಾರಿಯಾಗಿದ್ದರು.
ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಪಂದ್ಯಕ್ಕೆ ರಹಾನೆ ಆಯ್ಕೆಯಾಗುತ್ತಿದ್ದಂತೆ ತಂಡದ ಆಯ್ಕೆ ಬಗ್ಗೆ ಕೆಲವು ಹಿರಿಯ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. 29 ಇನ್ನಿಂಗ್ಸ್ಗಳಲ್ಲಿ ಕೇವಲಿ 4 ಅರ್ಧಶತಕ ಮಾತ್ರ ಬಾರಿಸಿರುವ ರಹಾನೆಗೆ ಅವಕಾಶ ಕೊಡುವುದಾದರೆ ರೋಹಿತ್ಗೆ ಅವಕಾಶ ಏಕಿಲ್ಲ ಎಂಬ ಕೂಗು ಕೇಳಿಬಂದಿತ್ತು.
ಪಂದ್ಯದ ನಂತರ ರೋಹಿತ್ ನಡೆಸಿದ ಸಂದರ್ಶದನದಲ್ಲಿ ಭಾಗಿಯಾಗಿದ್ದ ರಹಾನೆ, ಅನಗತ್ಯ ಟೀಕೆಗಳು ನನ್ನ ಮೇಲೆ ಯಾವುದೇ ಪ್ರಭಾವ ಬೀರದಂತೆ ಇರಲು ಬಯಸುತ್ತೇನೆ. ಆದ್ದರಿಂದಲೇ ಶತಕ ಸಿಡಿಸಿದಾಗ ನನ್ನಿಂದ ಖುಷಿಯನ್ನು ತಡೆದುಕೊಳ್ಳಲಾಗಲಿಲ್ಲ ಎಂದು ತಿಳಿಸಿದ್ದಾರೆ.
ನನ್ನ ಆಟ ನನಗೆ ತೃಪ್ತಿ ತಂದಿದೆ. ಶತಕ ಬಾರಿಸುವುದಕ್ಕಿಂದ ತಂಡವನ್ನು ಸುರಕ್ಷಿತ ಹಂತಕ್ಕೆ ತಲುಪಿಸಲು ಪ್ರಯತ್ನಿಸುತ್ತೇನೆ ಎಂದು ಮೊದಲ ಟೆಸ್ಟ್ ನಲ್ಲಿ 81 ಹಾಗೂ 102 ರನ್ಗಳಿಸಿ ಪಂದ್ಯ ಗೆಲುವಿನ ರೂವಾರಿಯಾದ ಬಳಿಕ ರಹಾನೆ ತಿಳಿಸಿದ್ದಾರೆ.