ಕರ್ನಾಟಕ

karnataka

ETV Bharat / sports

ಕಾಮೆಂಟರಿ ಮಾಡುವ ತಾಳ್ಮೆಯಿಲ್ಲ, ಆದರೆ ಐಸಿಸಿ ಟೂರ್ನಿಗಳಲ್ಲಿ ಪ್ರಯತ್ನಿಸುವೆ: ಯುವರಾಜ್​ ಸಿಂಗ್​ - commentate

ಭಾರತ ತಂಡದ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಕೈಫ್​ ಜೊತೆ ಇನ್​​​ಸ್ಟಾಗ್ರಾಂ ಲೈವ್​ನಲ್ಲಿ ಮಾತನಾಡುವ ವೇಳೆ ಕಾಮೆಂಟೇಟರ್ ಆಗುವ ಬಗ್ಗೆ ಯುವಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Yuvraj singh
ಯುವರಾಜ್​ ಸಿಂಗ್

By

Published : Apr 21, 2020, 1:13 PM IST

ನವದೆಹಲಿ: ನನಗೆ ಸದಾ ಕಾಮೆಂಟರಿ ಮಾಡುವಷ್ಟು ತಾಳ್ಮೆಯಿಲ್ಲ, ಆದ್ರೆ, ಐಸಿಸಿ ಇವೆಂಟ್​ಗಳಲ್ಲಿ ಕಾಮೆಂಟರಿ ಮಾಡಲು ಪ್ರಯತ್ನಿಸುವೆ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​ ತಿಳಿಸಿದ್ದಾರೆ.

ಭಾರತ ತಂಡದ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಕೈಫ್​ ಜೊತೆ ಇನ್​​ಸ್ಟಾಗ್ರಾಂ ಲೈವ್​ ಸೆಸನ್​ನಲ್ಲಿ ಮಾತನಾಡುವ ವೇಳೆ ಕಾಮೆಂಟೇಟರ್ ಆಗುವ ಬಗ್ಗೆ ಯುವಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ನನಗೆ ಸಾರ್ವಕಾಲಿಕ ಕಾಮೆಂಟರಿ ಮಾಡುವಷ್ಟು ತಾಳ್ಮೆಯಿಲ್ಲ. ಆದರೆ, ಐಸಿಸಿ ಇವೆಂಟ್​ಗಳಲ್ಲಿ ಕಾಮೆಂಟರಿಗೆ ಕೈಜೋಡಿಸುವೆ ಎಂದು ಯುವಿ ಹೇಳಿಕೊಂಡಿದ್ದಾರೆ.

ಒತ್ತಡವನ್ನು ಎದುರಿಸುವುದನ್ನು ಮೈದಾನದಲ್ಲಿ ಆಡಿದ ಆಟಗಾರರಿಗೆ ಮಾತ್ರ ಗೊತ್ತಿರುತ್ತದೆ. ಹೀಗಾಗಿ ನಾನು ಆಟಗಾರರನ್ನು ಟೀಕಿಸಲು ಇಷ್ಟವಿಲ್ಲದ ಕಾರಣ ಕಾಮೆಂಟರಿ ಮಾಡುವುದನ್ನು ಬಯಸುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಇನ್ನು ಕೋಚ್ ಹುದ್ದೆ ಕಡೆಗೆ ಹೆಚ್ಚಿನ ಆಸಕ್ತಿ ಇರುವುದಾಗಿ ತಿಳಿಸಿದ್ದಾರೆ. ಇದರಿಂದ ಹೆಚ್ಚಿನ ಜನರ ಜೊತೆ ಬೆರೆಯಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ABOUT THE AUTHOR

...view details