ಕರ್ನಾಟಕ

karnataka

ETV Bharat / sports

ಕ್ರಿಕೆಟ್​ ಜಗತ್ತಿನಲ್ಲಿ ಸಚಿನ್​ ದೊಡ್ಡ ಹೆಸರು ಮಾಡುತ್ತಾರೆಂದು ಭಾವಿಸಿರಲಿಲ್ಲ: ವಾಕರ್​ ಯೂನಿಸ್​ - ಸಚಿನ್​ ಬಗ್ಗೆ ವಾಕರ್​ ಯೂನಿಸ್​

1989ರಲ್ಲಿ ಸಚಿನ್​ ಪಾಕಿಸ್ತಾನದ ವಿರುದ್ಧ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಶಾಲಾ ದಿನಗಳಲ್ಲಿ ತ್ರಿಶತಕ ಸಿಡಿಸಿದ್ದ ಬಾಲಕನನ್ನ ನೋಡಿದ್ದ ತಮಗೆ ಅಷ್ಟೊಂದು ಆಕರ್ಷಣೀಯ ಎಂದು ಕಂಡಿರಲಿಲ್ಲ ಎಂದು ವಾಕರ್​ ಹೇಳಿದ್ದಾರೆ.

achin Tendulkar
ಸಚಿನ್​ ತಂಡೂಲ್ಕರ್​

By

Published : Jul 4, 2020, 6:25 PM IST

ನವದೆಹಲಿ: ಕೇವಲ 16 ವರ್ಷದವರಾಗಿದ್ದಾಗಲೇ ಭಾರತ ತಂಡ ಸೇರಿದ್ದ ಸಚಿನ್​ ತೆಂಡೂಲ್ಕರ್​ ಅವರ ಆರಂಭದ ದಿನಗಳನ್ನು ನೋಡುವುದಾದರೆ ಅವರು ಕ್ರಿಕೆಟ್​ ಜಗತ್ತಿನಲ್ಲಿ ಇಷ್ಟೊಂದು ದೊಡ್ಡ ಹೆಸರು ಮಾಡಬಲ್ಲರೆಂದು ನಾನು ಭಾವಿಸಿರಲಿಲ್ಲ ಎಂದು ಪಾಕಿಸ್ತಾನದ ಬೌಲಿಂಗ್​ ಲೆಜೆಂಡ್​ ವಾಕರ್ ಯೂನಿಸ್​ ಹೇಳಿದ್ದಾರೆ.

ವಿಶ್ವ ಕ್ರಿಕೆಟ್​ನಲ್ಲಿ ಏಕದಿನ ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​, ಹೆಚ್ಚು ಶತಕಗಳ ಸಹಿತ ಹಲವಾರು ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿರುವ ಸಚಿನ್​, ಕೇವಲ 16ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಅವರ ಕಠಿಣ ಪರಿಶ್ರಮ, ಆತ್ಮಬಲ ಅವರನ್ನು ವಿಶ್ವಶ್ರೇಷ್ಠ ಕ್ರಿಕೆಟಿಗನನ್ನಾಗಿ ಮಾಡಿದೆ. ಆದರೆ ಪಾಕ್​ ಲೆಜೆಂಡ್​

ವಾಕರ್​ ಯೂನಿಸ್​ ಸಚಿನ್​ರ ಆರಂಭದ ದಿನಗಳನ್ನು ನೆನೆದರೆ ಅವರು​ ಇಷ್ಟರ ಮಟ್ಟಿಗೆ ಹೆಸರು ಮಾಡುತ್ತಾರೆ, ಇಂತಹ ದೊಡ್ಡ ಕ್ರಿಕೆಟಿಗನಾಗುತ್ತಾರೆ ಎಂದು ಆಲೋಚನೆ ಮಾಡಿರಲಿಲ್ಲ ಎಂದಿದ್ದಾರೆ.

1989ರಲ್ಲಿ ಸಚಿನ್​ ಪಾಕಿಸ್ತಾನದ ವಿರುದ್ಧ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಶಾಲಾ ದಿನಗಳಲ್ಲಿ ತ್ರಿಶತಕ ಸಿಡಿಸಿದ್ದ ಬಾಲಕನನ್ನ ನೋಡಿದ್ದ ತಮಗೆ ಅಷ್ಟೊಂದು ಆಕರ್ಷಣೀಯ ಎಂದು ಕಂಡಿರಲಿಲ್ಲ ಎಂದು ವಾಕರ್​ ಹೇಳಿದ್ದಾರೆ.

ವಾಕರ್​ ಯೂನಿಸ್​

ಸಚಿನ್​ ಬಗ್ಗೆ ಹೇಳುವುದಾದರೆ, ಇಡೀ ಭಾರತದ ಅಂಡರ್​-19 ತಂಡ ಆ ಹುಡುಗನ ಬಗ್ಗೆ ಮಾತನಾಡುತ್ತಿತ್ತು. ಶಾಲಾ ಬಾಲಕ ತ್ರಿಶತಕ ಸಿಡಿಸಿದ್ದ. ಶಾಲಾ ಕ್ರಿಕೆಟ್​ನಲ್ಲಿ ಯಾರು ತ್ರಿಶತಕ ಸಿಡಿಸುತ್ತಾರೆ?, ಶತಕ ದಾಖಲಿಸಿದರೆ ಅದೊಂದು ಅದ್ಭುತವಾದ ವಿಷಯ ಎಂದು ಅವರು ಮಾತನಾಡಿಕೊಳ್ಳುತ್ತಿದ್ದರು ಎಂದು ವಾಕರ್​ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

'ನಮಗೂ ಕೂಡ ಆ ಯುವ ಆಟಗಾರನ ಬಗ್ಗೆ ತಿಳಿದಿತ್ತು. ಆದರೆ ನನಗೆ ಆತನನ್ನು ಮೊದಲು ನೋಡಿದಾಗ, ಆತ ನನಗೆ ಅಷ್ಟೇನೂ ಪ್ರಭಾವಿ ಎನಿಸಲಿಲ್ಲ. ಮುಂದೆ ಆತ ಕ್ರಿಕೆಟ್​ ಜಗತ್ತಿನ ಅದ್ಭುತ ಸಚಿನ್​ ತೆಂಡೂಲ್ಕರ್​ ಆಗುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಇಂದು ಅವರು ಏನಾಗಿದ್ದಾರೆ, ಇಷ್ಟು ವರ್ಷ ಏನನ್ನ ಸಾಧಿಸಿದ್ದಾರೆ, ಅದು ಮೈದಾನದ ಹೊರಗಾಗಿರಬಹುದು ಅಥವಾ ಒಳಗಾಗಿರಬಹುದು. ಒಂದು ನಿರ್ದಿಷ್ಟ ಸಮಯದಲ್ಲಿ ಅವರು ಕ್ರಿಕೆಟ್​ನಲ್ಲಿ​ ಬಹುದೊಡ್ಡ ಹೆಸರುಗಳಿಸುತ್ತಾರೆಂದು ನನಗೆ ಅರಿವಿರಲಿಲ್ಲ. ಆದರೆ ಅವರ ಕಠಿಣ ಪರಿಶ್ರಮ ಎಲ್ಲವನ್ನು ತಂದುಕೊಟ್ಟಿದೆ ಎಂದು ಅವರು ಹೇಳಿದ್ದಾರೆ.

47 ವರ್ಷದ ಸಚಿನ್​ ತೆಂಡೂಲ್ಕರ್​ ಒಟ್ಟಾರೆ 34567 ರನ್​ ಗಳಿಸಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 18426 ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ 15921 ರನ್​ ಗಳಿಸಿದ್ದಾರೆ. ಒಟ್ಟಾರೆ 100 ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದಾರೆ.

ABOUT THE AUTHOR

...view details