ಲಂಡನ್:ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಕ್ರಿಕೆಟ್ ದೈತ್ಯ ವೆಸ್ಟ್ ಇಂಡೀಸ್ ಬಹುತೇಕ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದೆ. ಆದರೂ ತಮಗೆ ಸೆಮೀಸ್ಗೆ ಹೋಗಲು ಸಣ್ಣದೊಂದು ಚಾನ್ಸ್ ಇದೆ ಎಂದು ತಂಡದ ಉಪನಾಯಕ ಕ್ರಿಸ್ ಗೇಲ್ ಹೇಳಿದ್ದಾರೆ.
ಕ್ರಿಕೆಟ್ನಲ್ಲಿಎಲ್ಲವೂ ಸಾಧ್ಯ, ಸೆಮೀಸ್ಗೆ ಲಗ್ಗೆ ಹಾಕಲು ಸಣ್ಣ ಚಾನ್ಸ್ ಇದೆ: ಗೇಲ್ - ಸೆಮಿಫೈನಲ್
ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ವಿರುದ್ಧ ನಾಳೆ ವೆಸ್ಟ್ ಇಂಡೀಸ್ ಸೆಣಸಾಟ ನಡೆಸಲಿದ್ದು, ಅದಕ್ಕೂ ಮುನ್ನಾದಿನವಾದ ಇಂದು ಕ್ರಿಸ್ ಗೇಲ್ ಸುದ್ದಿಗೋಷ್ಠಿಯಲ್ಲಿ ಭಾಗಿಯಾದರು.
ವೆಸ್ಟ್ ಇಂಡೀಸ್ ನಾಳೆ ಭಾರತದ ವಿರುದ್ಧ ಸೆಣಸಾಟ ನಡೆಸಲಿದ್ದು, ಗೆಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾ ವಿರುದ್ಧದ ಪಂದ್ಯ ನಿಜಕ್ಕೂ ಚಾಲೇಂಜ್ ಆಗಿರಲಿದೆ. ಭಾರತ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಗೆಲ್ಲುವ ಫೇವರಿಟ್ ತಂಡವಾಗಿದೆ. ನಾವೂ ಕೂಡ ಉತ್ತಮ ಕ್ರಿಕೆಟ್ ಆಡಲಿದ್ದೇವೆ. ಭಾರತದ ವಿರುದ್ಧ ಗೆಲುವು ದಾಖಲು ಮಾಡಲು ಹೊಸ ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದ್ದಾರೆ.
ವಿಶ್ವಕಪ್ನಲ್ಲಿ ಈಗಾಗಲೇ ವೆಸ್ಟ್ ಇಂಡೀಸ್ 6 ಪಂದ್ಯಗಳಲ್ಲಿ 4ರಲ್ಲಿ ಸೋಲು ಕಂಡಿದ್ದು, ಒಂದು ಪಂದ್ಯ ಡ್ರಾ ಮಾಡಿಕೊಳ್ಳುವ ಮೂಲಕ 3 ಅಂಕಗಳಿಸಿದೆ. ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿದ್ದು, ಗೆಲ್ಲಬೇಕಾದ ಅನಿವಾರ್ಯತೆ ಇದೆ.