ಮುಂಬೈ:ವೃತ್ತಿ ಜೀವನದ ಆರಂಭದ ವೇಳೆ ರನ್ಗಳಿಸದೆ ಪರಾದಾಡುತ್ತಿದ್ದ ಹಿಟ್ಮ್ಯಾನ್ ರೋಹಿತ್ ಶರ್ಮಾ, ಧೋನಿ ನೆರವಿನಿಂದ ಆರಂಭಿಕನಾಗಿ ಬಡ್ತಿ ಪಡೆದು ಕ್ರಿಕೆಟ್ ಜಗತ್ತಿನಲ್ಲೇ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿ ಮಿಂಚುತ್ತಿದ್ದಾರೆ. ಆದ್ರೆ ಧೋನಿ ಮಾತು ಕೇಳಿದ್ರೆ ನಾನು 2013ರಲ್ಲಿ ಸಿಡಿಸಿದ ಚೊಚ್ಚಲ ದ್ವಿಶತಕ ಸಿಡಿಸಲು ಆಗುತ್ತಿರಲಿಲ್ಲ ಎಂದು ರೋಹಿತ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ರವಿಚಂದ್ರನ್ ಅಶ್ವಿನ್ ಜೊತೆ ನಡೆಸಿದ ಇನ್ಸ್ಟಾಗ್ರಾಮ್ ಲೈವ್ ಸಂವಾದದಲ್ಲಿ ರೋಹಿತ್ ತಮ್ಮ ಚೊಚ್ಚಲ ದ್ವಿಶತಕ ಮೂಡಿಬಂದ ಸ್ಮರಣೀಯ ಇನ್ನಿಂಗ್ಸ್ ಬಗ್ಗೆ ಹಂಚಿಕೊಂಡಿದ್ದಾರೆ.
2013 ರ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ರೋಹಿತ್ ದ್ವಿಶತಕ ಸಿಡಿಸಿದ್ದರು. ಈ ವೇಳೆ ರೋಹಿತ್ ಆರಂಭಿಕ ಧವನ್(60) ಜೊತೆ ಸೇರಿ 112 ರನ್ಗಳ ಜೊತೆಯಾಟ ನಡೆಸಿದ್ದರು, ನಂತರ ಮತ್ತೆ ರೈನಾ ಜೊತೆಗೆ 73 ರನ್ಗಳ ಜೊತೆಯಾಟ ನಡೆಸಿದ್ದರು. ರೈನಾ( ಮತ್ತು ಯುವಿ(12)ಔಟಾದ ನಂತರ ಧೋನಿ ಕ್ರೀಸ್ಗೆ ಆಗಮಿಸಿದ್ದರು. ಶತಕದ ಗಡಿ ದಾಟಿದ ಬಳಿಕ ಧೋನಿ, ರೋಹಿತ್ಗೆ ಅಬ್ಬರ ಬ್ಯಾಟಿಂಗ್ ಮುಂದಾಗ ಬೇಡ ಎಂದಿದ್ದರಂತೆ. ಆದರೆ ಧೋನಿ ಮಾತನ್ನು ಕೇಳದೆ ನನ್ನಾಟ ಆಡಿದ್ದಕ್ಕೆ ದ್ವಿಶತಕ ಬಾರಿಸಿದೆ ಎಂದು ರೋಹಿತ್ ಹೇಳಿದ್ದಾರೆ.