ಕರ್ನಾಟಕ

karnataka

ETV Bharat / sports

2023ರ ವಿಶ್ವಕಪ್​ನಲ್ಲಿ ಆಡ್ತಾರಾ ಟೇಲರ್​, ನ್ಯೂಜಿಲ್ಯಾಂಡ್​ ಸ್ಫೋಟಕ ಆಟಗಾರ ಹೇಳಿದ್ದೇನು? - ಕ್ರಿಕೆಟ್​ ಸುದ್ದಿ

"ನಾನು 2023 ರ ವಿಶ್ವಕಪ್​ನಲ್ಲಿ ಆಡುವುದನ್ನು ತಳ್ಳಿಹಾಕಿಲ್ಲ. ಅದಕ್ಕಿನ್ನೂ ಸಮಯವಿದೆ. ಮುಂದಿನ ವರ್ಷದಲ್ಲಿ ಬರುವ ಟಿ20 ವಿಶ್ವಕಪ್​ ಸೇರಿದಂತೆ ತವರು ನೆಲದಲ್ಲಿ ನಡೆಯುವ ಪಂದ್ಯಗಳಲ್ಲಿ ನಾನು ಆಡಬೇಕಿದೆ. ಆ ಬಳಿಕ ನಾನು ವಿಶ್ವಕಪ್​ನಲ್ಲಿ ಸ್ಥಾನ ಗಳಿಸುವ ಬಗ್ಗೆ ಯೋಚನೆ ಮಾಡುತ್ತೇನೆ''

Ross Taylor
ರಾಸ್​ ಟೇಲರ್

By

Published : Feb 18, 2020, 12:03 PM IST

Updated : Feb 18, 2020, 12:18 PM IST

ವೆಲ್ಲಿಂಗ್ಟನ್​: ನ್ಯೂಜಿಲ್ಯಾಂಡ್​ನ ಅನುಭವಿ ಆಟಗಾರ ರಾಸ್​ ಟೇಲರ್​, ತಮ್ಮ ಫಿಟ್​ನೆಟ್​, ಫಾರ್ಮ್​ ಹಾಗೂ ಮುಂಬರುವ ವಿಶ್ವಕಪ್​ನಲ್ಲಿ ಆಡುವ ಇರಾದೆ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷ ನನ್ನ ಫಿಟ್​ನೆಸ್​ ಆಧಾರದ ಮೇಲೆ ತಂಡದಲ್ಲಿ ಸ್ಥಾನ ಪಡೆಯುವುದು ನಿರ್ಧಾರವಾಗುತ್ತೆ ಎಂದಿದ್ದಾರೆ.

ನ್ಯೂಜಿಲ್ಯಾಂಡ್​ ಸ್ಫೋಟಕ ಆಟಗಾರ ರಾಸ್​ ಟೇಲರ್

ನಾನು 2023 ರ ವಿಶ್ವಕಪ್​ನಲ್ಲಿ ಆಡುವುದನ್ನು ತಳ್ಳಿಹಾಕಿಲ್ಲ. ಅದಕ್ಕಿನ್ನೂ ಸಮಯವಿದೆ. ಮುಂದಿನ ವರ್ಷದಲ್ಲಿ ಬರುವ ಟಿ20 ವಿಶ್ವಕಪ್​ ಸೇರಿದಂತೆ ತವರು ನೆಲದಲ್ಲಿ ನಡೆಯುವ ಪಂದ್ಯಗಳಲ್ಲಿ ನಾನು ಆಡಬೇಕಿದೆ. ಆ ಬಳಿಕ ನಾನು ವಿಶ್ವಕಪ್​ನಲ್ಲಿ ಸ್ಥಾನ ಗಳಿಸುವ ಬಗ್ಗೆ ಯೋಚನೆ ಮಾಡುತ್ತೇನೆ. ಮುಂದಿನ ವರ್ಷದ ಕೊನೆಯಲ್ಲಿನ ನನ್ನ ಫಿಟ್​ನೆಸ್,​ ವಿಶ್ವಕಪ್​ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದನ್ನು ನಿರ್ಧರಿಸುತ್ತದೆ ಎಂದು ಟೇಲರ್​ ಹೇಳಿದ್ದಾರೆ.

ರಾಸ್​ ಟೇಲರ್​

ಫಿಟ್​ನೆಸ್​ ಹೊಂದಿ​, ನನ್ನ ಸ್ಥಾನಕ್ಕೆ ಅರ್ಹನಾಗಿದ್ದು ಆಡಲು ಸಾಧ್ಯವಾದರೆ, ಖಂಡಿತವಾಗಿಯೂ 2023ರಲ್ಲಿ ಆಡುವ ಆಯ್ಕೆಯನ್ನೇ ಆರಿಸಿಕೊಳ್ಳುತ್ತೇನೆ. ಆಟದಲ್ಲಿ ಮುಂದುವರಿಯುವ ಬಯಕೆಯ ಹೊರತಾಗಿಯೂ, ನಾನು ಹೆಚ್ಚು ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ಟೇಲರ್​ ಹೇಳಿಕೊಂಡಿದ್ದಾರೆ.

ರಾಸ್​ ಟೇಲರ್

ಶೀಘ್ರದಲ್ಲೇ ಹೊಸ ದಾಖಲೆ ನಿರ್ಮಿಸಲಿರೋ ರಾಸ್​ ಟೇಲರ್​:

35 ರ ಹರೆಯದ ಟೇಲರ್​, ಫೆಬ್ರವರಿ 21 ರಂದು ಬೇಸಿನ್ ರಿಸರ್ವ್‌ನಲ್ಲಿ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವುದರೊಂದಿಗೆ ಮೂರೂ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಲಾ 100 ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಕ್ರಿಕೆಟಿಗ ಆಗಲಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ನೂತನ ದಾಖಲೆ ನಿರ್ಮಿಸಲಿದ್ದಾರೆ.

ನ್ಯೂಜಿಲ್ಯಾಂಡ್​ ಬ್ಯಾಟ್ಸ್​ಮೆನ್​ ಟೇಲರ್
Last Updated : Feb 18, 2020, 12:18 PM IST

ABOUT THE AUTHOR

...view details