ಕ್ಯಾನ್ಬೆರಾ: ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸೋಲು ಕಂಡಿದ್ದರೂ ಕೆಲವೊಂದು ವಿಭಾಗದಲ್ಲಿ ಅನುಭವಿಸುತ್ತಿದ್ದ ಕೆಲವು ಲೋಪಗಳನ್ನು ತಿದ್ದಿಕೊಂಡಿದೆ. ಅದರಲ್ಲಿ ಕೆಳ ಕ್ರಮಾಂಕದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿರುವ ಹಾರ್ದಿಕ್ ಪಾಂಡ್ಯ ಕೂಡ ಕೊಹ್ಲಿ ಬಳಗದ ಸಕಾರಾತ್ಮಕ ಬದಲಾವಣೆಯಾಗಿದೆ.
ಈ ಪಂದ್ಯಕ್ಕೂ ಮುನ್ನ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಸತತ 3 ಹಾಗೂ ಆಸೀಸ್ ವಿರುದ್ಧ ಸತತ 2 ಏಕದಿನ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಆದರೆ, ಕ್ಯಾನ್‌ಬೆರಾದಲ್ಲಿ ರೋಚಕ 13 ರನ್ಗಳ ಗೆಲುವು ಪಡೆಯುವ ಮೂಲಕ ಮತ್ತೆ ಗೆಲುವಿನ ಹಳಿಗೆ ಮರಳಿದೆ. ಈ ಪಂದ್ಯದಲ್ಲಿ 92 ರನ್ಗಳಿಸಿದ ಹಾರ್ದಿಕ್ ಪಾಂಡ್ಯ ಕೊಹ್ಲಿ ಪಡೆಯ ವಿಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು.