ಆ್ಯಂಟಿಗುವಾ: ಭಾರತ ತಂಡದ ಏಕದಿನ ತಂಡದಲ್ಲಿ ಅವಕಾಶ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ರಹಾನೆ ವೈಯಕ್ತಿಕ ಕೋಚ್ ಪ್ರವೀಣ್ ಆಮ್ರೆ ತಮ್ಮ ಶಿಷ್ಯ ರಹಾನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟೆಸ್ಟ್ ತಂಡದ ಉಪನಾಯಕನಾಗಿರುವ ರಹಾನೆ ಹಾಗೂ ರೋಹಿತ್ ಶರ್ಮಾ ನಡುವೆ 5ನೇ ಕ್ರಮಾಂಕಕ್ಕೆ ತೀವ್ರವಾದ ಪೈಪೋಟಿ ಇತ್ತು. ಆದರೆ, ವೆಸ್ಟ್ ಇಂಡೀಸ್ ವಿರುದ್ಧ ರೋಹಿತ್ರನ್ನು ತಂಡದಿಂದ ಕೈಬಿಟ್ಟು ರಹಾನೆಗೆ ಟೀಮ್ ಇಂಡಿಯಾ ಮಣೆ ಹಾಕಿತ್ತು. ಇದರಿಂದ ಹಲವಾರು ಕ್ರಿಕೆಟಿಗರು ಶಾಸ್ತ್ರಿ ಹಾಗೂ ಕೊಹ್ಲಿಯನ್ನು ಟೀಕಿಸಿದ್ದರು. ಆದರೆ, ರಹಾನೆ ಆಕರ್ಷಕ ಶತಕ ಹಾಗೂ ಅರ್ಧಶತಕ ಸಿಡಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ರಹಾನೆ ವೈಯಕ್ತಿಕ ಕೋಚ್ ಪ್ರವೀಣ್ ಆಮ್ರೆ ರೋಹಿತ್ ಪ್ರತಿಭಾವಂತ ಕ್ರಿಕೆಟಿಗ, ಆತನ ಟೆಸ್ಟ್ನಲ್ಲಿ 5 ಶತಕ ಸಿಡಿಸಿದ ಮೇಲೂ ಹೆಚ್ಚಿನ ಅವಕಾಶ ನೀಡದಿರುವುದಕ್ಕೆ ನನಗೆ ವೈಯಕ್ತಿಕವಾಗಿ ಬೇಸರ ತರಿಸಿದೆ ಎಂದು ರೋಹಿತ್ಗೆ ಕ್ಷಮೆಯಾಚಿಸಿದ್ದಾರೆ.