ಕರ್ನಾಟಕ

karnataka

ETV Bharat / sports

ಕೊಹ್ಲಿ, ಯುವಿಗೂ ನನ್​ ಕಂಡ್ರೆ ಭಯವಿತ್ತು... ಗಂಭೀರ್​ ಕ್ರಿಕೆಟ್​ ಜೀವನ ನನ್ನಿಂದಲೇ ಅಂತ್ಯವಾಯ್ತು ಎಂದ ಪಾಕ್​ ಬೌಲರ್ - ಎಡಗೈ ವೇಗಿ ಇರ್ಫಾನ್

ಒಂದು ಕಾಲಘಟ್ಟದಲ್ಲಿ ದೆಹಲಿಯ ಬ್ಯಾಟ್ಸ್​ಮನ್​ ಗೌತಮ್ ಗಂಭೀರ್ ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್​ಮನ್​ ಆಗಿದ್ದರು. ಉತ್ತಮ ಆರಂಭಿಕನಾಗಿದ್ದ ಅವರು ಸೆಹ್ವಾಗ್​, ಸಚಿನ್​ ರೋಹಿತ್​ ಜೊತೆಗೆ ಇನ್ನಿಂಗ್ಸ್​ ಆರಂಭಿಸಿ ಉತ್ತಮ ದಾಖಲೆಗಳುನ್ನು ಹೊಂದಿದ್ದಾರೆ. ಇಂತಹ ಬ್ಯಾಟ್ಸ್​ಮನ್​ ಕ್ರಿಕೆಟ್​ ಜೀವನ ನನ್ನಿಂದಲೇ ಅಂತ್ಯವಾಯಿತು ಎಂದು ಇರ್ಫಾನ್​ ನಾಲಿಗೆ ಹರಿಬಿಟ್ಟ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Mohammad Irfan

By

Published : Oct 7, 2019, 5:42 PM IST

ನವದೆಹಲಿ:ಭಾರತ ತಂಡ ಗೆದ್ದಿರುವ ಟಿ-20 ಹಾಗೂ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಅತ್ಯುತ್ತಮ ಬ್ಯಾಟಿಂಗ್​ ನಡೆಸಿದ್ದ ಗಂಭೀರ್​ ಕ್ರಿಕೆಟ್​ ಜೀವನ ಅಂತ್ಯಗೊಳ್ಳಲು ನಾನೇ ಕಾರಣ ಎಂದು ಪಾಕಿಸ್ತಾನದ ವೇಗಿ ಮೊಹಮ್ಮದ್​ ಇರ್ಫಾನ್​ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಒಂದು ಕಾಲಘಟ್ಟದಲ್ಲಿ ದೆಹಲಿಯ ಬ್ಯಾಟ್ಸ್​ಮನ್​ ಗೌತಮ್ ಗಂಭೀರ್ ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್​ಮನ್​ ಆಗಿದ್ದರು. ಉತ್ತಮ ಆರಂಭಿಕನಾಗಿದ್ದ ಅವರು ಸೆಹ್ವಾಗ್​, ಸಚಿನ್​ ರೋಹಿತ್​ ಜೊತೆಗೆ ಇನ್ನಿಂಗ್ಸ್​ ಆರಂಭಿಸಿ ಉತ್ತಮ ದಾಖಲೆಗಳುನ್ನು ಹೊಂದಿದ್ದಾರೆ. ಇಂತಹ ಬ್ಯಾಟ್ಸ್​ಮನ್​ ಕ್ರಿಕೆಟ್​ ಜೀವನ ನನ್ನಿಂದಲೆ ಅಂತ್ಯವಾಯಿತು ಎಂದು ಇರ್ಫಾನ್​ ನಾಲಿಗೆ ಹರಿಬಿಟ್ಟಿದ್ದಾನೆ. ಈ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇರ್ಫಾನ್ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನ - ಭಾರತದ ನಡುವಿನ​ 2012ರಲ್ಲಿ ನಡೆದಿದ್ದ ದ್ವಿಪಕ್ಷೀಯ ಸರಣಿ ವೇಳೆ ಗಂಭಿರ್​​​ರನ್ನು ನಾನು ನಾಲ್ಕು ಬಾರಿ ಪೆವಿಲಿಯನ್​ಗೆ ಅಟ್ಟಿದ್ದೆ. ನನ್ನ ಬೌಲಿಂಗ್ ದಾಳಿಗೆ ಗಂಭೀರ್​ ಸೇರಿದಂತೆ ಹೆಚ್ಚಿನ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ರನ್​ಗಳಿಸಲು ಪರದಾಡುತ್ತಿದ್ದರು. ನಾನು ಬೌಲಿಂಗ್ ಮಾಡಲು ಬಂದರೆ ಗಂಭೀರ್‌ ಹೆದರುತ್ತಿದ್ದರು. ನಾನು ನೆಟ್ಸ್​ನಲ್ಲಿ ಬೌಲಿಂಗ್​ ಮಾಡಲು ಬಂದರೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ಸಹಾ ನೋಡುತ್ತಿರಲಿಲ್ಲ. ನನ್ನ ಬೌಲಿಂಗ್​ ಎಂದರೆ ನರ್ವಸ್​ ಆಗುತ್ತಿದ್ದರು ಎಂದು ಹೇಳಿದ್ದಾರೆ.

ಈ ಸರಣಿ ಬಳಿಕ ಗಂಭೀರ್​ ಕೇವಲ ಇಂಗ್ಲೆಂಡ್​ ಸರಣಿಗೆ ಮಾತ್ರ ಆಯ್ಕೆಯಾಗಿದ್ದರು. ಆದಾದ ಮೇಲೆ ಅವರನ್ನು ತಂಡದಿಂದ ಕೈಬಿಡಲಾಯಿತು. ಇದರಿಂದ ತುಂಬಾ ಜನರೂ ನನಗೆ ಶುಭಾಶಯ ಕೋರಿದ್ದರು ಎಂದಿದ್ದಾರೆ.

ಇನ್ನು ಭಾರತ ತಂಡದ ಪ್ರಸ್ತುತ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​ ಕೂಡ ಫುಲ್ ಶಾಟ್ ಹೊಡೆಯಲೆತ್ನಿಸಿ ನನ್ನ ಬೌಲಿಂಗ್​ನಲ್ಲಿ ಔಟ್ ಆಗಿದ್ದರು. ಇದನ್ನು ಸ್ವತಃ ಅವರೇ ನನ್ನ ಬಳಿ ಹೇಳಿದ್ದಾರೆ ಎಂದು ಇರ್ಫಾನ್​ ತಿಳಿಸಿದ್ದಾರೆ.

ಆದರೆ ಈ ಸುದ್ದಿ ವೈರಲ್​ ಆಗುತ್ತಿದ್ದಂತೆ ಭಾರತೀಯ ಅಭಿಮಾನಿಗಳು ಇರ್ಫಾನ್​ರನ್ನು ತುಂಬಾ ಮಾಡ್ತೀಯಾ ಎಂದಿದ್ದರೆ. ಮತ್ತೆ ಕೆಲವರು ಪಾಕಿಸ್ತಾನದ ಎಷ್ಟೋ ಆಟಗಾರರ ಕರಿಯರ್​ ಅಂತ್ಯಗೊಳಿಸಿದ್ದು ಗಂಭೀರ್​, ಆದ್ರೆ ನೀನು ಗಂಭೀರ್​ ಕರಿಯರ್​ ಅಂತ್ಯಗೊಳಿಸಿದ್ದೇ ನಾನು ಎಂದು ದೊಡ್ಡ ಜೋಕ್​ ಮಾಡ್ತೀದ್ದೀಯಾ ಎಂದು ಕಾಲೆಳೆಯುತ್ತಿದ್ದಾರೆ.

ABOUT THE AUTHOR

...view details