ಸಿಡ್ನಿ: ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ವಿಧಿಸಿರುವ ಲಾಲಾರಸ ನಿಷೇಧ ಬೌಲರ್ಗಳಿಗೆ ದೊಡ್ಡ ವಿಷಯವಲ್ಲ ಎಂದು ಚೆಂಡು ಹೊಳೆಯಲು ಬೆವರು ಬಳಸಬಹುದಾಗಿದೆ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಗ್ರೆಗ್ ಚಾಪೆಲ್ ಹೇಳಿದ್ದಾರೆ.
"ಅವರು ಹಣೆಯಿಂದ ಬೆವರನ್ನು ಒರೆಸುತ್ತಿದ್ದರೆ, ಅಲ್ಲಿ ಸನ್ಸ್ಕ್ರೀನ್ ಇದೆ ಒಂದು ವೇಳೆ ಲಾಲಾರಸವನ್ನು ಬಳಸುತ್ತಿದ್ದರೆ, ಅವರು ಬಹುಶಃ ಏನನ್ನಾದರೂ ಅಗಿಯುತ್ತಿದ್ದಾರೆ. ಆದ್ದರಿಂದ ಅದರಲ್ಲಿ ಏನಿದೆ? "ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಹೇಳಿದ್ದಾರೆ.
"ಇದೊಂದು ಅಷ್ಟು ದೊಡ್ಡ ವಿಚಾರ ಎಂದು ನನಗೆ ಗೊತ್ತಿಲ್ಲ. ಬೆವರು ಲಾಲಾರಸಕ್ಕೆ ಸಮನಾಗಿರುತ್ತದೆ. ಪ್ರಾಮಾಣಿಕವಾಗಿ ಹೇಳುತ್ತೇನೆ ಎರಡರಲ್ಲಿ ನನಗೆ ವ್ಯತ್ಯಾಸ ಕಾಣುತ್ತಿಲ್ಲ" ಎಂದು ಚಾಪೆಲ್ ತಿಳಿಸಿದ್ದಾರೆ.
ಇಲ್ಲಿ ಯಾರೂ ಚೆಂಡಿನ ದೊಡ್ಡ ಸ್ವಿಂಗರ್ಸ್ಗಳಲ್ಲ. ಸ್ಟಾರ್ಕ್ನಂತಹ ಬೌಲರ್ಗಳಿ ರಿವರ್ಸ್ ಸ್ವಿಂಗ್ ಮಾಡಬಹುದು. ಹೆಚ್ಚಿನ ವೇಗ ಮತ್ತು ಬೌನ್ಸ್ ನಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ ಎಂದು ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಚೆಂಡನ್ನು ಹೊಳೆಯುವಂತೆ ಮಾಡಲು ಕೂಕಬೂರ್ಗಾದಿಂದ ಮಾಡಿದ ಕೃತಕ ಮೇಣವನ್ನು ಬಳಸುವ ಅಗತ್ಯ ಬೌಲರ್ಗಳಿಗೆ ಇಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ತಿಳಿಸಿದ್ದಾರೆ.