ಕರ್ನಾಟಕ

karnataka

ETV Bharat / sports

ನಾನಿನ್ನೂ ಚಿಕ್ಕವನು, ಐಸಿಸಿ ಅಧ್ಯಕ್ಷನಾಗಬೇಕೆಂಬ ಆತುರವಿಲ್ಲ : ಸೌರವ್​ ಗಂಗೂಲಿ - ಕ್ರಿಕೆಟ್​ ದಕ್ಷಿಣ ಆಫ್ರಿಕಾ ಅಧ್ಯಕ್ಷ ಗ್ರೇಮ್​ ಸ್ಮಿತ್​

ಇವೆಲ್ಲವು ಗೌರವಯುತ ಸ್ಥಾನಗಳು. ಜೀವನದಲ್ಲಿ ಒಮ್ಮೆ ಮಾಡುವ ಉದ್ಯೋಗಳು. ನೀವು ಈ ಹಿಂದೆ ಶ್ರೇಷ್ಠ ಆಡಳಿತಗಾರರು ಒಂದು ಅವಧಿಗೆ ಅಧಿಕಾರದಲ್ಲಿದ್ದಿದ್ದನ್ನು ನೋಡಿದ್ದೀರ. ಒಂದು ವೇಳೆ ನಾನು ಐಸಿಸಿ ಅಧ್ಯಕ್ಷರಾಗುವ ಸಮಯ ಬಂದರೆ, ಅದು ಬಿಸಿಸಿಐ ಸದಸ್ಯರ ಒಮ್ಮತದ ತೀರ್ಮಾನವಾಗಿರಲಿದೆ..

ಸೌರವ್​ ಗಂಗೂಲಿ
ಸೌರವ್​ ಗಂಗೂಲಿ

By

Published : Jul 13, 2020, 5:42 PM IST

ಕೋಲ್ಕತ್ತಾ :ಐಸಿಸಿ ಅಧ್ಯಕ್ಷ ಹುದ್ದೆಗೆ ಭಾರತೀಯ ಮೂಲದ ಶಶಾಂಕ್​ ಮನೋಹರ್​ ರಾಜೀನಾಮೆ ನೀಡಿದ್ದಾರೆ. ಆ ಹುದ್ದೆಗೆ ಮತ್ತೊಬ್ಬ ಭಾರತೀಯ ಸೌರವ್​ ಗಂಗೂಲಿ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಆದರೆ, ದಾದಾ ಮಾತ್ರ ನಾನಿನ್ನು ಚಿಕ್ಕವನು, ಐಸಿಸಿ ಹುದ್ದೆಗೇರುವ ಆತುರ ನನಗೆ ಇಲ್ಲ ಎಂದು ತಿಳಿಸಿದ್ದಾರೆ.

ಐಸಿಸಿ ಮುಖ್ಯಸ್ಥ ಹುದ್ದೆ ಕುರಿತು ನನಗೆ ಏನೂ ತಿಳಿದಿಲ್ಲ. ನಾನಿನ್ನು ಚಿಕ್ಕವನು, ಇಷ್ಟು ಬೇಗ ಕ್ರಿಕೆಟ್​ನ ದೊಡ್ಡ ಮಟ್ಟದ ಹುದ್ದೆಗೇರುವ ಆತುರವಿಲ್ಲ ಎಂದಿದ್ದಾರೆ. ಪ್ರಸ್ತುತ ಐಸಿಸಿ ನಿಯಮಗಳು ಬದಲಾಗಿವೆ. ಐಸಿಸಿ ಅಧ್ಯಕ್ಷ ಹುದ್ದೆಗೇರಬೇಕಾದ್ರೆ ತನ್ನ ದೇಶದ ಕ್ರಿಕೆಟ್​ ಬೋರ್ಡ್​ನ ಪದವಿಯಿಂದ ಕೆಳಗಿಳಿಯಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಿಸಿಸಿಐ ಬಿಟ್ಟು ಹೋಗುವುದು ಸರಿಯಲ್ಲ ಎಂದು ದಾದಾ ತಿಳಿಸಿದ್ದಾರೆ.

"ಇವೆಲ್ಲವು ಗೌರವಯುತ ಸ್ಥಾನಗಳು. ಜೀವನದಲ್ಲಿ ಒಮ್ಮೆ ಮಾಡುವ ಉದ್ಯೋಗಳು. ನೀವು ಈ ಹಿಂದೆ ಶ್ರೇಷ್ಠ ಆಡಳಿತಗಾರರು ಒಂದು ಅವಧಿಗೆ ಅಧಿಕಾರದಲ್ಲಿದ್ದಿದ್ದನ್ನು ನೋಡಿದ್ದೀರ. ಒಂದು ವೇಳೆ ನಾನು ಐಸಿಸಿ ಅಧ್ಯಕ್ಷರಾಗುವ ಸಮಯ ಬಂದರೆ, ಅದು ಬಿಸಿಸಿಐ ಸದಸ್ಯರ ಒಮ್ಮತದ ತೀರ್ಮಾನವಾಗಿರಲಿದೆ " ಎಂದು ದಾದಾ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಮಂಡಳಿಯ ನಿರ್ದೇಶಕ ಗ್ರೇಮ್​ ಸ್ಮಿತ್​, ಇಂಗ್ಲೆಂಡ್​ ತಂಡದ ಮಾಜಿ ಕ್ರಿಕೆಟಿಗ ಡೇವಿಡ್​ ಗೋವರ್​ ಕೂಡ ಐಸಿಸಿ ಅಧ್ಯಕ್ಷರಾಗುವ ಎಲ್ಲಾ ಆರ್ಹತೆಗಳು ಗಂಗೂಲಿ ಅವರಿಗಿವೆ ಎಂದಿದ್ದರು. ಗಂಗೂಲಿ ಮನಸ್ಸು ಮಾಡಿದ್ರೆ ಈಗಾಗಲೇ ಐಸಿಸಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಇಂಗ್ಲೆಂಡ್​ ಮತ್ತು ವೇಲ್ಸ್ ಕ್ರಿಕೆಟ್​ ಮಂಡಳಿಯ ಮಾಜಿ ಅಧ್ಯಕ್ಷ ಕಾಲಿನ್ ಗ್ರೇವ್ಸ್​ ಅವರನ್ನು ಸುಲಭವಾಗಿ ಹಿಂದಿಕ್ಕಬಹುದು ಎಂಬ ಮಾತು ಕೇಳಿ ಬಂದಿದ್ದವು.

ABOUT THE AUTHOR

...view details