ಅಡಿಲೇಡ್ :ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮನ್ನು ತಾವು "ಹೊಸ ಭಾರತದ ಪ್ರತಿನಿಧಿ" ಎಂದು ಹೇಳಿದ್ದಾರೆ. ಆಶಾವಾದದೊಂದಿಗೆ ಸವಾಲುಗಳನ್ನು ಎದುರಿಸಲು ಎಂದೆಂದಿಗೂ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಟೀಂ ಇಂಡಿಯಾ ಮಾಜಿ ತರಬೇತುದಾರ ಗ್ರೆಗ್ ಚಾಪೆಲ್ ಅವರ "ಸಾರ್ವಕಾಲಿಕ ಆಸ್ಟ್ರೇಲಿಯಾದ ಆಸ್ಟ್ರೇಲಿಯೇತರ ಕ್ರಿಕೆಟಿಗ" ಹೇಳಿಕೆಗೆ ಪ್ರತಿಕ್ರಿಯಿಸಿದ ವಿರಾಟ್ ಈ ಹೇಳಿಕೆ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿರಾಟ್ ಕೊಹ್ಲಿಗೆ ಆಕ್ರಮಣಕಾರಿ ಕ್ರಿಕೆಟಿಗ ಎಂಬ ಬ್ರ್ಯಾಂಡ್ ಮತ್ತು ಹೋರಾಟದ ಮನೋಭಾವದ ಕುರಿತು ಚಾಪೆಲ್ ನೀಡಿದ್ದ ಹೇಳಿಕೆ ಬಗ್ಗೆ ಪ್ರಶ್ನೆ ಮಾಡಲಾಯಿತು.
ಓದಿನನ್ನ ಅನುಪಸ್ಥಿತಿಯಲ್ಲಿ ರಹಾನೆ ತಂಡವನ್ನು ಉತ್ತಮವಾಗಿ ಮುನ್ನಡೆಸಲಿದ್ದಾರೆ: ಕೊಹ್ಲಿ ವಿಶ್ವಾಸ
ಇದಕ್ಕೆ ಉತ್ತರಿಸಿದ ಕೊಹ್ಲಿ, "ನಾನು ಯಾವಾಗಲೂ ನಾನೇ ಎಂದು ಹೇಳಲು ಬಯಸುತ್ತೇನೆ. ನನ್ನ ವ್ಯಕ್ತಿತ್ವದ ರೀತಿಗೆ, ನನ್ನನ್ನು ನಾನು ಹೊಸ ಭಾರತದ ಪ್ರತಿನಿಧಿ ಎಂದೇ ನೋಡುತ್ತೇನೆ. ನಾನು ಆಸ್ಟ್ರೇಲಿಯಾ ತಂಡದೊಂದಿಗೆ ಹೋಲಿಕೆ ಮಾಡುತ್ತಿಲ್ಲ. ಆದರೆ, ಭಾರತೀಯ ಕ್ರಿಕೆಟ್ ತಂಡವಾಗಿ ಎದ್ದು ನಿಲ್ಲಲು ಪ್ರಾರಂಭಿಸಿದ್ದೇವೆ. ನನ್ನ ವ್ಯಕ್ತಿತ್ವ ಮೊದಲ ದಿನದಿಂದಲೂ ಹೀಗೇ ಇದೆ" ಎಂದು ಹೇಳಿದ್ದಾರೆ.
"ಹೊಸ ಭಾರತವು ಆಶಾವಾದ ಮತ್ತು ಸಕಾರಾತ್ಮಕತೆಯಿಂದ ತುಂಬಿದ್ದು, ಸವಾಲುಗಳನ್ನು ತೆಗೆದುಕೊಳ್ಳುತ್ತದೆ. ನಮ್ಮ ಹಾದಿಗೆ ಬರುವ ಯಾವುದೇ ಸವಾಲುಗಳಿಗೆ ನಾವು ಸಿದ್ಧರಿದ್ದೇವೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ" ಎಂದಿದ್ದಾರೆ.