ಕರ್ನಾಟಕ

karnataka

ETV Bharat / sports

ಕೊಹ್ಲಿ ಕೆಲಸವನ್ನ ಸುಲಭಗೊಳಿಸುವೆ.. ತೊಂದರೆ ಕೊಡಲ್ಲ:  ಗಂಗೂಲಿ ಈ ಮಾತಿನ ಮರ್ಮವೇನು? - ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ

ಬಿಸಿಸಿಐ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸೌರವ್​ ಗಂಗೂಲಿ ನಾಳೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅವರನ್ನ ಭೇಟಿ ಮಾಡೋದಾಗಿ ತಿಳಿಸಿದ್ದಾರೆ.

ಸೌರವ್​ ಗಂಗೂಲಿ

By

Published : Oct 23, 2019, 5:59 PM IST

Updated : Oct 23, 2019, 7:33 PM IST

ಮುಂಬೈ:ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಭಾರತ ಕ್ರಿಕೆಟ್​ ತಂಡದ ಮುಖ್ಯ ವ್ಯಕ್ತಿ ಎಂದು ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಸೌರವ್ ಗಂಗೂಲಿ, ಬಿಸಿಸಿಐ ನೂತನ ಅಧ್ಯಕ್ಷ

ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿರುವ ಗಂಗೂಲಿ, ವಿರಾಟ್​ ಕೊಹ್ಲಿ ಭಾರತೀಯ ಕ್ರಿಕೆಟ್​ನ ಮುಖ್ಯ ವ್ಯಕ್ತಿ. ನಾನು ಅಧ್ಯಕ್ಷನಾಗಿರುವುದು ಕೊಹ್ಲಿ ಕೆಲಸವನ್ನ ಸುಲಭಗೊಳಿಸಲು, ಕಷ್ಟ ನೀಡಲು ಅಲ್ಲ ಎಂದಿದ್ದಾರೆ.

ಕೊಹ್ಲಿ ಮುಖ್ಯವಾದ ವ್ಯಕ್ತಿ ನಾನು ಅವರೊಂದಿಗೆ ನಾಳೆ ಮಾತನಾಡುತ್ತೇನೆ. ನನ್ನ ಅಧಿಕಾರದ ಅವಧಿಯಲ್ಲಿ ಎಲ್ಲ ರೀತಿಯ ಸಹಕಾರ ನೀಡಲು ನಾನು ಬದ್ಧನಾಗಿದ್ದೇನೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಟೀಂ ಇಂಡಿಯಾ ಉತ್ತಮ ಪ್ರದರ್ಶನ ತೋರುತ್ತಿದೆ. ಈ ತಂಡ ವಿಶ್ವದಲ್ಲೇ ಬೆಸ್ಟ್​ ಟೀಂ ಆಗಬೇಕೆಂಬುದು ನನ್ನ ಆಸೆ ಎಂದಿದ್ದಾರೆ.

ಸೌರವ್​ ಗಂಗೂಲಿ

ನಾವು ಭಾರತೀಯ ಕ್ರಿಕೆಟ್​ನ ಭವಿಷ್ಯದ ಕುರಿತು ಯೋಚನೆ ಮಾಡಬೇಕಾಗುತ್ತದೆ. ಈ ದುಷ್ಠಿಯಲ್ಲಿ ವಿರಾಟ್ ಮುಖ್ಯ ವ್ಯಕ್ತಿಯಾಗಿದ್ದಾರೆ, ಅವರು ಹೇಳುವುದನ್ನ ಕೇಳುತ್ತೇವೆ. ಅವರಿಗೆ ನಮ್ಮ ಬೆಂಬಲ ಇದ್ದೇ ಇದೆ. ನಾನು ಕೂಡ ನಾಯಕನಾಗಿದ್ದರಿಂದ ನನಗೆ ಅರ್ಥವಾಗುತ್ತದೆ. ಪರಸ್ಪರ ಗೌರವದಿಂದ ವಿಷಯಗಳನ್ನ ಚರ್ಚೆ ನಡೆಸಿ ತಂಡಕ್ಕೆ ಒಳಿತಾಗುವ ನಿರ್ಧಾರವನ್ನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

Last Updated : Oct 23, 2019, 7:33 PM IST

ABOUT THE AUTHOR

...view details