ಕರ್ನಾಟಕ

karnataka

ETV Bharat / sports

ಸೋಲದೆ ಗೆದ್ದರೆ ಮಂದಹಾಸ, ಸೋತು ಗೆದ್ದರೆ ಇತಿಹಾಸ: ಟ್ವೀಟ್ ಮಾಡಿದ ಆರ್​ಸಿಬಿ! - ಐಪಿಎಲ್​ 2020

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಎಲಿಮಿನೇಟರ್​ ಹಂತಕ್ಕೆ ಬಂದು ನಿಂತಿರುವ ಆರ್​ಸಿಬಿ ಇಂದು ಹೈದರಾಬಾದ್​ ವಿರುದ್ಧ ಸೆಣಸಾಟ ನಡೆಸಿದ್ದು, ಇದರ ಬೆನ್ನಲ್ಲೇ ಸ್ಫೂರ್ತಿದಾಯಕ ಟ್ವೀಟ್ ಮಾಡಿದೆ.

Hyderabad vs Bangalore
Hyderabad vs Bangalore

By

Published : Nov 6, 2020, 10:39 PM IST

ಅಬುಧಾಬಿ: ಇಂಡಿಯನ್​ ಪ್ರೀಮಿಯರ್ ಲೀಗ್​​ನ ಎಲಿಮಿನೇಟರ್​ ಪಂದ್ಯದಲ್ಲಿ ಇಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್​ರೈಸರ್ಸ್​​ ಹೈದರಾಬಾದ್​ ತಂಡ ಮುಖಾಮುಖಿಯಾಗಿದ್ದು, ಪಂದ್ಯಕ್ಕೂ ಮುನ್ನ ಆರ್​ಸಿಬಿ ಸ್ಫೂರ್ತಿದಾಯಕ ಟ್ವೀಟ್​ ಮಾಡಿದೆ.

ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸಿನೊಂದಿಗೆ ಆರ್​ಸಿಬಿ ಇಂದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದು, ಇಲ್ಲಿ ಗೆದ್ದರೆ ಮಾತ್ರ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಳ್ಳಲಿದೆ. ಇದರ ಮಧ್ಯೆ ಆರ್​ಸಿಬಿ ಸೋಲದೆ ಗೆದ್ದರೆ... ಮಂದಹಾಸ, ಸೋತು ಗೆದ್ದರೆ... ಇತಿಹಾಸ ಎಂದು ಟ್ವೀಟ್​ ಮಾಡಿದೆ.

ಕಳೆದ 13 ಆವೃತ್ತಿಗಳಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪ್ರಶಸ್ತಿಗೆ ಮುತ್ತಿಕ್ಕಿಲ್ಲ. ಈ ಸಲ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿದಿರುವ ವಿರಾಟ್​ ಪಡೆ ಗೆದ್ದು ಇತಿಹಾಸ ನಿರ್ಮಿಸುವ ಇರಾದೆಯಲ್ಲಿದೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಇಂದಿನ ಪಂದ್ಯದ ಮೇಲೆ ನಿರ್ಧಾರವಾಗಲಿದೆ.

ABOUT THE AUTHOR

...view details