ಹೈದರಾಬಾದ್: ಐಪಿಎಲ್ ಆಯೋಜಿಸಲು ಹೈದರಾಬಾದ್ ನಗರವನ್ನು ಆಯ್ಕೆ ಮಾಡಿ ಎಂದು ತೆಲಂಗಾಣದ ಐಟಿ ಸಚಿವ ಕೆಟಿ ರಾಮರಾವ್ ಮನವಿಗೆ ಹೈದರಾಬಾದ್ ಕ್ರಿಕೆಟ್ ಆಸೋಸಿಯೇಷನ್ ಅಧ್ಯಕ್ಷ ಮತ್ತು ಮಾಜಿ ಟೀಮ್ ಇಂಡಿಯಾ ನಾಯಕ ಮೊಹಮದ್ ಅಜರುದ್ದೀನ್ ಕೂಡ ಧ್ವನಿಗೂಡಿಸಿದ್ದಾರೆ.
2021ರ ಐಪಿಎಲ್ ಆಯೋಜಿಸುವ ಬಿಸಿಸಿಐ ತೀರ್ಮಾನಿಸಿರುವ ಪ್ರಮುಖ ಸ್ಥಳಗಳಲ್ಲಿ ಹೈದರಾಬಾದ್ ಇಲ್ಲವೆಂದು ಕೆಲವು ವರದಿಗಳ ಬಂದ ನಂತರ ಅಜರುದ್ದೀನ್ರಿಂದ ಈ ಅಭಿಪ್ರಾಯ ವ್ಯಕ್ತವಾಗಿದೆ.
ತೆಲಂಗಾಣ ಮಿನಿಸ್ಟರ್ ಹಾಗೂ ಟಿಆರ್ಎಸ್ನ ವರ್ಕಿಂಗ್ ಪ್ರೆಸಿಡೆಂಟ್ ಕೆಟಿ ರಾಮರಾವ್ "ಹೈದರಾಬಾದ್ ಅನ್ನು ಮುಂಬರುವ ಐಪಿಎಲ್ ಆಯೋಜಿಸುವ ಸ್ಥಳಗಳಲ್ಲಿ ಒಂದಾಗಿ ಸೇರಿಸಬೇಕು. ನಮ್ಮ ಪರಿಣಾಮಕಾರಿ ಕೋವಿಡ್ 19 ಕ್ರಮಗಳಿಂದ ಭಾರತದ ಎಲ್ಲ ಮೆಟ್ರೋ ನಗರಗಳಿಗಿಂತ ಕಡಿಮೆ ಸಂಖ್ಯೆಯ ಕೋವಿಡ್ ಪ್ರಕರಣವನ್ನು ಹೊಂದಿರುವಂತೆ ಮಾಡಿದೆ. ಜೊತೆಗೆ ಸರ್ಕಾರದಿಂದ ನಿಮಗೆ ಎಲ್ಲ ಬೆಂಬಲದ ಭರವಸೆ ನೀಡುತ್ತೇವೆ" ಎಂದು ಟ್ವೀಟ್ ಮಾಡಿದ್ದರು.
ನಾನು ಕೆಟಿಆರ್ ಮನವಿಗೆ ಬೆಂಬಲ ನೀಡುತ್ತೇನೆ. ಬಿಸಿಸಿಐ ನಿರ್ದೇಶನದಂತೆ ಐಪಿಎಲ್ ನಿರ್ವಹಿಸಲು ಮತ್ತು ನಡೆಸಲು ಬಯೋಬಬಲ್ ತಯಾರಿಸಲು ಹೈದರಾಬಾದ್ ಸಂಪೂರ್ಣವಾಗಿ ಸಮರ್ಥವಾಗಿದೆ ಎಂದು ಹೆಚ್ಸಿಎ ಅಧ್ಯಕ್ಷ ಅಜರುದ್ದಿನ್ ಟ್ವೀಟ್ ಮಾಡಿದ್ದಾರೆ.
2021 ಐಪಿಎಲ್ ಆಯೋಜಿಸಲು ಬಿಸಿಸಿಐ 5 ಸ್ಥಳಗಳನ್ನು ಹುಡುಕುತ್ತಿದೆ. ಮುಂಬೈನಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಒಂದೇ ಸ್ಥಳದಲ್ಲಿ ಲೀಗ್ ನಡೆಸುವುದು ಕಾರ್ಯಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ಇತರ 4ರಿಂದ 5 ಸ್ಥಳಗಳನ್ನು ಆಯೋಜಿಸಲು ತೀರ್ಮಾನಿಸಿದೆ.