ಬೆಂಗಳೂರು: ಕೊನೆಯ ಎರಡು ಎಸೆತದಲ್ಲಿ ತಲಾ ಒಂದು ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದ ಡೇವಿಡ್ ಮೆಥಾಯಿಸ್ ಹುಬ್ಬಳ್ಳಿ ಟೈಗರ್ಸ್ಗೆ 3 ವಿಕೆಟ್ಗಳ ರೋಚಕ ಜಯ ತಂದುಕೊಟ್ಟಿದ್ದಾರೆ.
ಬಿಜಾಪುರ್ ಬುಲ್ಸ್ ನೀಡಿದ 124 ರನ್ಗಳನ್ನು ಗುರಿ ಬೆನ್ನೆತ್ತಿಟ್ಟಿದ ಹುಬ್ಬಳ್ಳಿ ಟೈಗರ್ಸ್ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತಾದರೂ ಸಂಘಟಿತ ಹೋರಾಟ ನಡೆಸಿ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತು.
ಆರಂಭಿಕರಾದ ತಾಹಾ 1, ವಿಶ್ವನಾಥ್ 9, ಲುವ್ನಿತ್ 4 ರನ್ ನಾಯಕ ವಿನಯ್ ಕುಮಾರ್ 4 ರನ್ಗಳಿಗೆ ವಿಕೆಟ್ ಒಪ್ಪಿಸಿದ ಔಟಾಗಿ ಹುಬ್ಬಳ್ಳಿ ತಂಡಕ್ಕೆ ಆಘಾತ ತಂದಿದ್ದರು.ಇದರ ಜೊತೆಗೆ ಕೆಎಲ್ ಶ್ರೀಜಿತ್ 30 ಎಸೆತಗಳಿಗೆ ಕೇವಲ 18 ರನ್ಗಳಿಸಿ ಔಟಾಗಿತ್ತು ವಿನಯ್ ಬಳಗಕ್ಕೆ ನುಂಗಲಾರದ ತುತ್ತಾಗಿತ್ತು.