ಮುಂಬೈ: ಮಂಗಳವಾರ ಪಾಕಿಸ್ತಾನ ಪ್ರೀಮಿಯರ್ ಲೀಗ್ನ 5ನೇ ಆವೃತ್ತಿ ಮುಗಿದಿದ್ದು, ಕರಾಚಿ ಕಿಂಗ್ಸ್ 5 ವಿಕೆಟ್ಗಳಿಂದ ಲಾಹೋರ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಾರ್ಚ್ನಲ್ಲಿ ಮುಗಿಯಬೇಕಿದ್ದ ಈ ಟೂರ್ನಿ ಕೋವಿಡ್ ಕಾರಣದಿಂದ ಆರಂಭವಾದ 8 ತಿಂಗಳ ಬಳಿಕ ಮುಗಿದಿದೆ.
ಪಿಎಸ್ಎಲ್ ಆರಂಭವಾದ ದಿನದಿಂದಲೂ ಕೆಲವರು ಐಪಿಎಲ್ನೊಂದಿಗೆ ಹೋಲಿಕೆ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಲೀಗ್ನಲ್ಲಿ ವಿಜೇತ ತಂಡ ಪಡೆದ ಹಣ, ಆಟಗಾರರ ಗಳಿಸುವ ವೇತನ ಹಾಗೂ ಕ್ರಿಕೆಟ್ ಬೋರ್ಡ್ ಗಳಿಸಿಕೊಳ್ಳುವ ಹಣದಲ್ಲಿ ಭಾರಿ ವ್ಯತ್ಯಾಸವಿದೆ.
ಎರಡು ಲೀಗ್ಗಳ ವಿಜೇತ ತಂಡಗಳು ಗಳಿಸಿಕೊಂಡ ಬಹುಮಾನ ಮೊತ್ತಕ್ಕೆ ಹೋಲಿಕೆ ಮಾಡಿ ನೋಡುವುದಾದರೆ, ಐಪಿಎಲ್ ವಿನ್ನರ್ ಮುಂಬೈ ಇಂಡಿಯನ್ಸ್ 20 ಕೋಟಿ ರೂ. ಪಡೆದರೆ, ಪಿಎಸ್ಎಲ್ ವಿನ್ನರ್ ಕರಾಚಿ ಕಿಂಗ್ಸ್ ಪಡೆದಿದ್ದು ಕೇವಲ 3.75 ಕೋಟಿ ರೂ. ಇನ್ನು ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ 12.5 ಕೋಟಿ ರೂ. ಪಡೆದರೆ, ಪಿಎಸ್ಎಲ್ ರನ್ನರ್ ಅಪ್ ಲಾಹೋರ್ ಕಲಂದರ್ಸ್ ಪಡೆದಿದ್ದು ಜಸ್ಟ್ 1.5 ಕೋಟಿ ರೂ. ಅಷ್ಟೇ.
ಆದರೆ ವೈಯಕ್ತಿಕ ಪ್ರಶಸ್ತಿಗಳ ವಿಭಾಗದಲ್ಲಿ ಮಾತ್ರ ಎರಡು ಲೀಗ್ಗಳಲ್ಲೂ ವಿಜೇತರಿಗೆ ಸಮಾನ ಮೊತ್ತವನ್ನು ನೀಡಲಾಗಿದೆ. ಅತ್ಯುತ್ತಮ ಬ್ಯಾಟ್ಸ್ಮನ್, ಅತ್ಯುತ್ತಮ ಬೌಲರ್, ಅತ್ಯುತ್ತಮ ಫೀಲ್ಡರ್, ಅತ್ಯುತ್ತಮ ವಿಕೆಟ್ ಕೀಪರ್, ಉದಯೋನ್ಮುಖ ಆಟಗಾರ ಪ್ರಶಸ್ತಿಗಳಿಗೆ ಐಪಿಎಲ್ನಂತೆ ತಲಾ 10 ಲಕ್ಷ ನೀಡಲಾಗಿದೆ.
ಆದರೆ, ಐಪಿಎಲ್ನಲ್ಲಿ 3 ಮತ್ತು 4ನೇ ಸ್ಥಾನ ಪಡೆಯುವ ತಂಡಗಳೂ ಕೂಡ 8.75 ಕೋಟಿ ರೂ ಪಡೆಯಲಿವೆ. ಆದರೆ, ಪಿಎಸ್ಎಲ್ನಲ್ಲಿ 3 ಮತ್ತು 4ನೇ ಸ್ಥಾನ ಪಡೆಯುವ ತಂಡಗಳಿಗೆ ಯಾವುದೇ ಬಹುಮಾನ ಮೊತ್ತ ನೀಡುತ್ತಿಲ್ಲ. ಇನ್ನು ವಿಶೇಷವೆಂದರೆ ಐಪಿಎಲ್ನಲ್ಲಿ 4ನೇ ಸ್ಥಾನ ಪಡೆಯುವ ತಂಡದ ಮೊತ್ತ ಪಿಎಸ್ಎಲ್ನ ಒಟ್ಟಾರೆ ಬಹುಮಾನ ಮೊತ್ತಕ್ಕಿಂತ (7.5)ಕಡಿಮೆಯಿದೆ.