ಕರ್ನಾಟಕ

karnataka

ETV Bharat / sports

ಹೋಟೆಲ್​ ಕ್ವಾರಂಟೈನ್ 'ಸಮಸ್ಯೆ'ಯಾಗಿಲ್ಲ​: ಸಿಡ್ನಿಯಲ್ಲಿರುವುದು​​ ಚಾಲೆಂಜ್​ ಆಗಿದೆ ಎಂದ ರಹಾನೆ - India captain Ajinkya Rahane

ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ಕ್ವಾರಂಟೈನ್​ ಸಮಸ್ಯೆ ಅನುಭವಿಸುತ್ತಿದೆ ಎಂಬ ಮಾತು ಈ ಹಿಂದಿನಿಂದಲೂ ಕೇಳಿ ಬರುತ್ತಿದ್ದು, ಅದಕ್ಕೆ ಕ್ಯಾಪ್ಟನ್​ ರಹಾನೆ ಖುದ್ದಾಗಿ ಸ್ಪಷ್ಟನೆ ನೀಡಿದ್ದಾರೆ.

India captain Ajinkya Rahane
India captain Ajinkya Rahane

By

Published : Jan 6, 2021, 4:38 PM IST

Updated : Jan 6, 2021, 5:04 PM IST

ಸಿಡ್ನಿ:ನಾಳೆಯಿಂದ ಭಾರತ-ಆಸ್ಟ್ರೇಲಿಯಾ ನಡುವೆ ಮೂರನೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದ್ದು, ಸಿಡ್ನಿಯಲ್ಲಿ ಉಭಯ ತಂಡಗಳು ಸೆಣಸಾಟ ನಡೆಸಲಿವೆ. ಇದೇ ವಿಚಾರವಾಗಿ ಟೀಂ ಇಂಡಿಯಾ ಕ್ಯಾಪ್ಟನ್​ ರಹಾನೆ ಮಾತನಾಡಿದ್ದು, ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ.

ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಉಳಿದುಕೊಂಡಾಗಿನಿಂದಲೂ ಕ್ವಾರಂಟೈನ್​ ಬಗ್ಗೆ ಹಲವು ಆರೋಪಗಳು ಕೇಳಿ ಬರುತ್ತಿವೆ. ಈ ವಿಚಾರವಾಗಿ ಮಾತನಾಡಿರುವ ರಹಾನೆ, ಟೀಂ ಇಂಡಿಯಾ ಆಟಗಾರರಿಗೆ​ ಕೊರೊನಾ ಪ್ರೋಟೋಕಾಲ್​ನಿಂದ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಹೋಟೆಲ್​ ಹೊರಗಿನ ಜೀವನ ನೋಡಿದಾಗ ಸ್ವಲ್ಪಮಟ್ಟದ ನಿರಾಸೆಯಾಗಿರುವುದು ನಿಜ ಎಂದಿದ್ದಾರೆ.

ಸಿಡ್ನಿಯಲ್ಲಿ ಕೇವಲ ಹೋಟೆಲ್​ನಲ್ಲಿ ಉಳಿದುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಗೊಂಡಿರುವ ಕಾರಣ ಪ್ಲೇಯರ್ಸ್​ಗಳಿಗೆ ಸಮಸ್ಯೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಟೀಂ ಇಂಡಿಯಾ ಕ್ಯಾಪ್ಟನ್ ರಹಾನೆ

ಮುಂದಿನ ಟೆಸ್ಟ್​ ಪಂದ್ಯಕ್ಕಾಗಿ ನಾವೆಲ್ಲರೂ ಸಿದ್ಧರಾಗಿದ್ದೇವೆ. ಉತ್ತಮವಾದ ಕ್ರಿಕೆಟ್ ಆಡಲು ತಯಾರಿ ನಡೆಸಿದ್ದು, ಸಿಡ್ನಿ ಟೆಸ್ಟ್​ ನಮಗೆ ಅತಿ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ. ಈಗಾಗಲೇ ಮುಕ್ತಾಯಗೊಂಡಿರುವ ಟೆಸ್ಟ್​ನಲ್ಲಿ ಉಭಯ ತಂಡಗಳು ತಲಾ ಒಂದರಲ್ಲಿ ಗೆಲುವು ಸಾಧಿಸಿದ್ದು, ಮೆಲ್ಬೋರ್ನ್​ನಲ್ಲಿ ಟೀಂ ಇಂಡಿಯಾ ಜಯ ಸಾಧಿಸಿ ಮುಂದಿನ ಪಂದ್ಯದಲ್ಲೂ ಗೆಲುವಿನ ನಗೆ ಬೀರುವ ಇರಾದೆಯಲ್ಲಿದೆ.

ಟೀಂ ಇಂಡಿಯಾ ಟೆಸ್ಟ್ ತಂಡ

ನಾಳೆಯಿಂದ ಆರಂಭಗೊಳ್ಳಲಿರುವ ಟೆಸ್ಟ್​ ಪಂದ್ಯಕ್ಕಾಗಿ ಟೀಂ ಇಂಡಿಯಾ ಈಗಾಗಲೇ ತಂಡ ಪ್ರಕಟಿಸಿದ್ದು, ಆರಂಭಿಕರಾಗಿ ರೋಹಿತ್ ಶರ್ಮಾ ಮೈದಾನಕ್ಕಿಳಿಯಲಿದ್ದು, ನವದೀಪ್​ ಸೈನಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

Last Updated : Jan 6, 2021, 5:04 PM IST

ABOUT THE AUTHOR

...view details