ನವದೆಹಲಿ: ನ್ಯೂಜಿಲ್ಯಾಂಡ್ ಟೂರ್ನಿಂದ ಭಾರತಕ್ಕೆ ಮರಳಿ ಬಂದ ಮೇಲೆ ಆಟಗಾರರು ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ಕುಟುಂಬದವರ ಜತೆ ರಜೆ ಮಜೆ ಅನುಭವಿಸುತ್ತಿದ್ದಾರೆ.
ವಿಶ್ರಾಂತಿ ಮಜಾದಲ್ಲಿ ಟೀಂ ಇಂಡಿಯಾ ಆಟಗಾರರು...ಧವನ್ ಏರಿದ್ದೇನು? - ಶಿಖರ್ ಧವನ್
ಭಾರತದ ಆರಂಭಿಕ ಆಟಗಾರ ಗಬ್ಬರ್ ಸಿಂಗ್ ಎಂದೇ ಖ್ಯಾತರಾಗಿರುವ ಧವನ್ ಅಭ್ಯಾಸದ ವೇಳೆ ಕುದುರೆ ಸವಾರಿ ನಡೆಸಿ ಗಬ್ಬರ್ ಸಿಂಗ್ ಅವತಾರದಲ್ಲಿ ಮಿಂಚಿದ್ದಾರೆ.
![ವಿಶ್ರಾಂತಿ ಮಜಾದಲ್ಲಿ ಟೀಂ ಇಂಡಿಯಾ ಆಟಗಾರರು...ಧವನ್ ಏರಿದ್ದೇನು?](https://etvbharatimages.akamaized.net/etvbharat/images/768-512-2494150-805-eb2e143b-929b-4de8-9909-9658433d7754.jpg)
dd
ಹೌದು ಭಾರತೀಯ ಆಟಗಾರರು ನಿರಂತರ ಕ್ರಿಕೆಟ್ನಿಂದ ಸುಸ್ತು ಹೊಡೆದಿದ್ದರು. ಇದೀಗ ಅವರಿಗೆ ಹಲವು ದಿನಗಳ ಕಾಲ ಬಿಡುವು ಸಿಕ್ಕಿದೆ. ಇದೇ ಅವಧಿಯನ್ನ ವಿಶ್ರಾಂತಿಗೆ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಟೀಂ ಇಂಡಿಯಾ ಓಪ್ನರ್ ಹಾಗೂ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಮಾತ್ರ ಕುದುರೆ ರೇಸ್ನಲ್ಲಿ ಬ್ಯೂಸಿಯಾಗಿದ್ದಾರೆ.
ಕುದುರೆ ಏರಿ ರೇಸ್ ಪ್ರಾಕ್ಟೀಸ್ ಮಾಡ್ತಿದ್ದಾರೆ. ಕ್ರೀಡಾಂಗಣದಲ್ಲಿ ಕುದುರೆ ಏರಿ ರೌಂಡ್ಸ್ ಹಾಕಿ ಎಂಜಾಯ್ ಮಾಡ್ತಿದ್ದಾರೆ. ಕುದುರೆ ಏರಿದ ವಿಡಿಯೋವೊಂದನ್ನ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ.