ಕರ್ನಾಟಕ

karnataka

ETV Bharat / sports

ಮಯಾಂಕ್​ ಆಟ ನೋಡಿ ಖುಷಿಯಾಗಿದೆ, ಆದ್ರೆ ಮುಂದಿನ ವರ್ಷ ಸ್ಪಲ್ಪ ಕಷ್ಟ: ಗವಾಸ್ಕರ್​ ಕಿವಿಮಾತು - ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಮಯಾಂಕ್​ ಅಬ್ಬರ

ಅಗರ್​ವಾಲ್​ ಆಟ ನೋಡಿ ಖುಷಿಯಾಗಿದೆ. ಆಫ್​ಸೈಡ್​ನಲ್ಲಿ ಯಾವುದೇ ತಪ್ಪಿಲ್ಲದೆ ತುಂಬಾ ಸಲೀಸಾಗಿ ರನ್​ ತೆಗೆಯುತ್ತಾರೆ. ಮಯಾಂಕ್​ ಪಾದಚಲನೆಯ ಕೌಶಲ್ಯ ಅವರಿಗೆ ಅತ್ಯುನ್ನತ ಫಾರ್ಮ್​ ತಂದುಕೊಟ್ಟಿದೆ. ಅವರು ಇದೇ ಪ್ರದರ್ಶನವನ್ನು ಕಾಯ್ದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್ ತಿಳಿಸಿದ್ದಾರೆ.​

Mayank Agarwal

By

Published : Nov 20, 2019, 11:04 AM IST

ಕೋಲ್ಕತ್ತಾ: ಟೆಸ್ಟ್​ ಕ್ರಿಕೆಟ್​ನಲ್ಲಿ ರಾರಾಜಿಸುತ್ತಿರುವ ಕನ್ನಡಿಗ ಮಯಾಂಕ್​ ಅಗರ್​ವಾಲ್​ ಬ್ಯಾಟಿಂಗ್​ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಲಿಟಲ್​ ಮಾಸ್ಟರ್​ ಸುನಿಲ್​ ಗವಾಸ್ಕರ್​ ಹೊಗಳಿಕೆಯ ಜೊತೆಗೆ ಮಯಾಂಕ್​ಗೆ ಎಚ್ಚರಿಕೆಯ ಕಿವಿಮಾತೂ ಹೇಳಿದ್ದಾರೆ.

ಅಗರ್​ವಾಲ್​ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ​ ಹೊಸ ಪರಿಚಯವಾಗಿದ್ದು ಟೆಸ್ಟ್​ ಕ್ರಿಕೆಟನ್ನು ಎಂಜಾಯ್​ ಮಾಡುತ್ತಿದ್ದಾರೆ. ಅವರು ಈ ಆಟದ ವೈಖರಿಯನ್ನು ಮುಂದಿನ ಆವೃತ್ತಿಯಲ್ಲೂ ಮುಂದುವರಿಸುತ್ತಾರೆ ಎಂಬ ನಂಬಿಕೆಯಿದೆ. ಆದರೆ ಅತ್ಯುನ್ನತ ಫಾರ್ಮ್​ನಲ್ಲಿರುವ ಅಗರ್​ವಾಲ್​ ಬಗ್ಗೆ ತಿಳಿದುಕೊಳ್ಳಲು ಎದುರಾಳಿಗಳು ಶುರುಮಾಡಿದ್ದಾರೆ. ಅವರ ವಿರುದ್ಧ ತಂತ್ರಗಾರಿಕೆಗಳನ್ನು ರೂಪಿಸಿ ರನ್ ​ಗಳಿಸದಂತೆ ಮಾಡಲು ಸಿದ್ದರಾಗಿರುತ್ತಾರೆ ಎಂದು ಗವಾಸ್ಕರ್​ ಹೇಳಿದ್ದಾರೆ.

ಅಗರ್​ವಾಲ್​ ಆಟ ನೋಡಲು ತುಂಬಾ ಖುಷಿಯಾಗುತ್ತಿದೆ. ಆಫ್​ಸೈಡ್​ನಲ್ಲಿ ಯಾವುದೇ ತಪ್ಪಿಲ್ಲದೆ ಅವರು ಸಲೀಸಾಗಿ ರನ್​ ತೆಗೆಯುತ್ತಾರೆ. ಮಯಾಂಕ್​ ಪಾದಚಲನೆಯ ಕೌಶಲ್ಯ ಅವರಿಗೆ ಅತ್ಯುನ್ನತ ಫಾರ್ಮ್​ ತಂದುಕೊಟ್ಟಿದೆ. ಅವರು ಇದೇ ಪ್ರದರ್ಶನವನ್ನು ಕಾಯ್ದುಕೊಳ್ಳುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ರು.

ಮಯಾಂಕ್​ ಕೇವಲ 8 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದ ಪಂದ್ಯದಲ್ಲೇ 76 ಹಾಗೂ 42 ರನ್ ​ಗಳಿಸಿದ್ದರು. ನಂತರದ ಪಂದ್ಯದಲ್ಲಿ 77 ರನ್ ಕಲೆ ಹಾಕಿದ್ದಾರೆ. ವಿಂಡೀಸ್​ ಸರಣಿಯಲ್ಲಿ ವಿಫಲವಾದರೂ ಹರಿಣಗಳ ವಿರುದ್ಧ 215 ಹಾಗೂ 108 ರನ್​ಗಳಿಸಿ ಹಾಗೂ ಬಾಂಗ್ಲಾದೇಶದ ವಿರುದ್ಧ 243 ರನ್ ​ಸಾಧನೆ ಮಾಡಿದ್ದಾರೆ.

ಅಗರ್​ವಾಲ್​ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ 740 ರನ್ ​ಗಳಿಸುವ ಮೂಲಕ ಹೆಚ್ಚು ರನ್​ ಗಳಿಸಿದವರಲ್ಲಿ ಸ್ಮಿತ್​(771) ನಂತರದ ಸ್ಥಾನ ಪಡೆದಿದ್ದಾರೆ.

ABOUT THE AUTHOR

...view details