ಹೈದರಾಬಾದ್(ತೆಲಂಗಾಣ): ನೂತನ ಲೋಗೋ, ಜರ್ಸಿಯೊಂದಿಗೆ ಕಣಕ್ಕಿಳಿಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಹೊಸ ಹುರುಪಿನೊಂದಿಗೆ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. ಈ ಮಧ್ಯೆ ಆರ್ಸಿಬಿಗೆ ಮದ್ಯದ ದೊರೆ ವಿಜಯ್ ಮಲ್ಯ ಗೆಲುವಿನ ಕುರಿತು ಸಲಹೆ ನೀಡಿದ್ದಾರೆ.
ಈ ಹಿಂದೆ ಆರ್ಸಿಬಿ ತಂಡದ ಮಾಲೀಕರಾಗಿದ್ದ ವಿಜಯ್ ಮಲ್ಯ ತಂಡಕ್ಕೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯ್ ಮಲ್ಯ, 'ವಿರಾಟ್ ಕೊಹ್ಲಿ ಅಂಡರ್-19 ತಂಡದಿಂದ ಆರ್ಸಿಬಿ ತಂಡಕ್ಕೆ ಬಂದಿದ್ದಾರೆ. ಸ್ವತಃ ಉತ್ತಮ ಪ್ರದರ್ಶನ ನೀಡುತ್ತಿರುವ ವಿರಾಟ್ ಟೀಂ ಇಂಡಿಯಾವನ್ನ ಮುತ್ತಮವಾಗಿ ಮುನ್ನಡೆಸುತ್ತಿದ್ದಾರೆ. ವಿರಾಟ್ ಕೊಹ್ಲಿಗೆ ಸ್ವಾತಂತ್ರ್ಯ ನೀಡಿ. ಆರ್ಸಿಬಿ ಅಭಿಮಾನಿಗಳು ದೀರ್ಘ ಕಾಲದಿಂದ ಐಪಿಎಲ್ ಟ್ರೋಫಿಗೆ ಎದುರು ನೋಡುತ್ತಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.