ನವದೆಹಲಿ: ಭಾರತ ತಂಡ 3ನೇ ಟೆಸ್ಟ್ ಪಂದ್ಯದಲ್ಲಿ ಡ್ರಾ ಸಾಧಿಸಲು ಕಾರಣರಾದ ಅಶ್ವಿನ್, ಚೇತೇಶ್ವರ್ ಪೂಜಾರ ಮತ್ತು ರಿಷಭ್ ಪಂತ್ ಆಟವನ್ನು ಶ್ಲಾಘಿಸಿದ್ದು, ಮುಂಬರುವ ಬ್ರಿಸ್ಬೇನ್ ಟೆಸ್ಟ್ ಗೆದ್ದು ಟೆಸ್ಟ್ ಸರಣಿ ಗೆಲ್ಲಬೇಕೆಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.
"ನಮಗೆಲ್ಲಾ ಭಾರತ ತಂಡದಲ್ಲಿ ಪೂಜಾರ, ಪಂತ್ ಮತ್ತು ಅಶ್ವಿನ್ ಪ್ರಾಮುಖ್ಯತೆ ಏನು ಎಂಬುದು ಅರಿವಾಗಿದೆ ಎಂದು ನಾನು ಭಾವಿಸುತ್ತೇನೆ. ಟೆಸ್ಟ್ ಕ್ರಿಕೆಟ್ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಅತ್ಯುತ್ತಮ ಗುಣಮಟ್ಟದ ಬೌಲರ್ಗಳನ್ನು ಎದುರಿಸುವುದೆಂದರೆ ಅದು ಯಾವಾಗಲು ದೊಡ್ಡ ಹೊಡೆತ ಬಾರಿಸುವುದಲ್ಲ. ಹೆಚ್ಚು ಕಡಿಮೆ 400 ವಿಕೆಟ್ ಸುಮ್ಮನೆ ಬಂದಿಲ್ಲ. ಭಾರತ ಅದ್ಭುತವಾದ ಹೋರಾಟ ನಡೆಸಿದೆ. ಇದು ಸರಣಿ ಗೆಲ್ಲುವ ಸಮಯ" ಎಂದು ಮುಂದಿನ ಪಂದ್ಯವನ್ನು ಗೆಲ್ಲಬೇಕೆಂದು ಟ್ವೀಟ್ ಮೂಲಕ ಟೀಮ್ ಇಂಡಿಯಾಗೆ ಕಿವಿಮಾತು ಹೇಳಿದ್ದಾರೆ.